ಹಂಡೇಲು ಸುತ್ತಲ್ಲಿ ಟೈಲ್ಸ್ ಚೂರು-ಬಿಸಾಡುವ ಮೂರ್ಖರ್ಯಾರು ? *ಕಜವು ತಂದು ಹಾಕುವ ಕಜವುಗಳು!

Picture of Namma Bedra

Namma Bedra

Bureau Report

ಹಂಡೇಲು ಸುತ್ತು. ಸುತ್ತು ಕೆಲವು ಇದೆ.ಇದು ಸ್ವಲ್ಪ ಡೇಂಜರ್ ಸುತ್ತು.ಹಾಗಾಗಿ ಈ ಪ್ರದೇಶದಲ್ಲಿ ಅಪಗಪಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತದೆ.
ಹಿಂದೆಲ್ಲಾ ಇದೇ ಸುತ್ತಲ್ಲಿ ತ್ಯಾಜ್ಯವಸ್ತುಗಳನ್ನು ತಂದು ಎಸೆಯುತ್ತಿದ್ದುದರಿಂದ ದುರ್ವಾಸನಾ ಪ್ರದೇಶವಾಗಿತ್ತು. ಪುತ್ತಿಗೆ ಪಂಚಾಯತ್ ನವರು ಇಲ್ಲೊಂದು ಸಿಸಿ ಕೆಮರಾ ಅಳವಡಿಸಿದ್ದರಿಂದ ಕೆಲಕಾಲ ಅದು ಕಡಿಮೆಯಾಗಿತ್ತು.
ಯಾವಾಗ ಸಿಸಿಕೆಮರಾದ ಮಂಡೆ ಸರಿಇಲ್ಲ ಅಂತ ಗೊತ್ತಾಯ್ತಾ…. ಮತ್ತೆ ಕೆಲವು ಕಜವುಗಳು ಇಲ್ಲಿಗೆ ಕಸದರಾಶಿ ತಂದು ಹಾಕುತ್ತಿದ್ದಾರೆ.ಅದರ ಗಾತ್ರ ಈಗ ದೊಡ್ಡದಾಗುತ್ತಿದೆ!


ಮತ್ತೊಂದು ಶುರುವಾಗಿದೆ.ಕಟ್ಟಡ,ಮನೆಗಳಿಗೆ ಬಳಸುವ ಟೈಲ್ಸ್ ಗಳ ಪೀಸ್ ಪೀಸನ್ನು ರಸ್ತೆ ತುಂಬಾ ಬಿರ್ಕುತ್ತಾ ಹೋಗುವುದು. ಇವರಿಗೆ ಗುತ್ತಿಗೆ ಕೊಟ್ಟವರ್ಯಾರೆಂದು ಗೊತ್ತಿಲ್ಲ. ಈ ರೀತಿ ರಸ್ತೆಬದಿ ಟೈಲ್ಸ್ ಪೀಸ್ ಗಳಿರುವುದರಿಂದ ಸಣ್ಣ ವಾಹನಗಳಿಗೆ ಅಪಾಯ.


ಪುತ್ತಿಗೆ ಪಿ.ಡಿ.ಒ. ಸ್ಟ್ರಿಕ್ಟ್ ಆಫಿಸರ್. ಕಜವು ತಂದು ಹಾಕುವ ಕಜವುಗಳನ್ನು, ಟೈಲ್ಸ್ ಪೀಸ್ ಗಳನ್ನು ತಂದೆಸೆಯುವ ಪೀಸ್ ಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತಾರೆನ್ನುವ ವಿಶ್ಚಾಸ ಸ್ಥಳೀಯರದ್ದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top