ನೂತನವಾಗಿ ಮಾರುಕಟ್ಟೆಗೆ ಬಂದಿರುವ ‘ಐ ಫೋನ್- 17 ಪ್ರೋ’ ಮೊಬೈಲ್ ನ್ನು ಮೂಡುಬಿದಿರೆಯಲ್ಲಿ ಪ್ರಥಮವಾಗಿ ಇಲ್ಲಿನ ಅಲ್ ಝೈನ್ ಮೊಬೈಲ್ ಶಾಪ್ ನಲ್ಲಿ ಬಿಡುಗಡೆಗೊಳಿಸಲಾಯಿತು .
ಫಾರ್ಚೂನ್ ಪ್ರಮೋಟರ್ಸ್ ನ ಪಾಲುದಾರರಾದ ಡೆನ್ನಿಸ್ ಪಿರೇರ ಅವರು ಪ್ರಥಮ ಗ್ರಾಹಕರಾಗಿ ಸುಮಾರು ಒಂದೂವರೆ ಲಕ್ಷ ರೂ.ಮೌಲ್ಯದ ನೂತನ ಮೊಬೈಲನ್ನು ಪ್ರಥಮ ಗ್ರಾಹಕರಾಗಿ ಖರೀದಿಸಿದರು.
ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಮಾಜಿ ಅಧ್ಯಕ್ಷ ಪೂರ್ಣಚಂದ್ರ ಜೈನ್ ,ಪ್ರದೀಪ್ ಸಿಂಚನಾ, ಜೆ.ಪಿ, ಹಾಗೂ ಅಲ್ ಝೈನ್ ಮೊಬೈಲ್ ಶಾಪ್ ಮಾಲಕ ಫಾರೂಕ್ ಅವರು ಈ ಸಂದರ್ಭದಲ್ಲಿದ್ದರು.






