ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಜನುಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗವು ಬೃಹತ್ ರಕ್ತದಾನ ಶಿಬಿರವನ್ನು ರಿಂಗ್ ರೋಡ್ ನ ಪ್ರೀತಮ್ ಗಾರ್ಡನ್ ಹಾಲ್ ನಲ್ಲಿ ಹಮ್ಮಿಕೊಂಡಿತ್ತು.

ಬ್ಲಡ್ ಡೋನರ್ಸ್ ಹೆಲ್ಪ್ ಲೈನ್ ಮೂಡುಬಿದಿರೆ ಮತ್ತು ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ಈ ಶಿಬಿರವನ್ನು ಆಳ್ವಾಸ್ ಹೆಲ್ತ್ ಸೆಂಟರ್ ನ ಪಿ.ಆರ್.ಒ ರಾಜೇಶ್,ಬ್ಲಡ್ ಬ್ಯಾಂಕ್ ನ ಲೀಲಾ ಹಾಗೂ ಬ್ಲಡ್ ಡೋನರ್ಸ್ ಮೂಡುಬಿದಿರೆ ಮುಖ್ಯಸ್ಥ ಕ್ಲಾರಿಯೋ ಡಿಸೋಜ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಮಾಹಿತಿ ಮತ್ತು ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಮಿಥುನ್ ರೈ, ವಿವೇಕ್ ಆಳ್ವ,ಡಾ.ಹನಾ ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ರಾಜೇಶ್ ಕಡಲಕೆರೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






