ಬೆದ್ರದಲ್ಲಿ ಗಮನಸೆಳೆದ ‘ಸ್ನೇಹಕೂಟ ಕಂಬಳ’

Picture of Namma Bedra

Namma Bedra

Bureau Report

ಕಂಬಳವನ್ನು ಹೀಗೂ ಮಾಡಬಹುದೆನ್ನುವುದನ್ನು ಮಾಡಿ ತೋರಿಸಿ ಯಶಸ್ವಿಯಾಗಿದ್ದಾರೆ ಮಿಜಾರಿನ ಹರಿಮೀನಾಕ್ಷಿ ದೋಟದ ಸುರೇಶ್ ಶೆಟ್ಟಿ.
ಇದು ಮೂಡುಬಿದಿರೆಯಲ್ಲಿ ನಡೆದ ಸ್ನೇಹಕೂಟ ಕಂಬಳ.ನಿರೀಕ್ಷೆಯಂತೆ ಎಲ್ಲವೂ ಯಶಸ್ವಿಯಾಗಿದೆ,ಸಾಕಷ್ಟು ಸಂಖ್ಯೆಯ ಕಂಬಳ ಕೋಣಗಳೂ ಭಾಗವಹಿಸಿದೆ. ಇತರ ಕಂಬಳದಂತೆ ಕಂಬಳಾಭಿಮಾನಿಗಳೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.


ಸುರೇಶ್ ಶೆಟ್ಟಿ ಅವರ ಸಾರಥ್ಯದಲ್ಲಿ ತುಳುನಾಡ ಸೇನೆ ವತಿಯಿಂದ ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮದಲ್ಲಿ ಕಳೆದ ಭಾನುವಾರ ನಡೆದ ಸ್ನೇಹಕೂಟ ಕಂಬಳವು ಈ ಭಾಗದ ಜನರ ಮನಗೆದ್ದು ಗಮನಸೆಳೆದಿದೆ.
ಚೌಟರ ಅರಮನೆಯ ಕುಲದೀಪ್ ಎಂ.ಅವರು ಕಂಬಳ ಕರೆಯನ್ನು ಉದ್ಘಾಟಿಸಿದ್ದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ಕಂಬಳವನ್ನು ಉದ್ಘಾಟಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್,ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ,ಉದ್ಯಮಿ ರಂಜಿತ್ ಪೂಜಾರಿ ತೋಡಾರು, ಮಿಜಾರು ಹರಿಮೀನಾಕ್ಷಿ ದೋಟದ ಹರಿಯಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top