ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಲೆಟ್ ಪಿಂಟೊ ಅವರನ್ನು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಯ ಅಧ್ಯಕ್ಷರಾದ ಜೀವನ್ ಕೆ.ಶೆಟ್ಟಿ ಅವರು ಅಭಿನಂದಿಸಿದ್ದಾರೆ.
ಶಾಲೆಟ್ ಪಿಂಟೊ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿರುವ ಅವರು ‘ ಮೂಲ್ಕಿ ತಾಲೂಕು ನದಿ ತೀರದ ಸೌಂದರ್ಯ,ಸ್ವಚ್ಛ ಕಡಲತೀರಗಳು,ಪಾರಂಪರಿಕ ದೇವಾಲಯಗಳು ಹಾಗೂ ಸಮೃದ್ಧ ಜೀವ ವೈವಿಧ್ಯದಿಂದ ಸಮೃದ್ಧವಾದ ಪ್ರದೇಶವಾಗಿದೆ,ಪರಿಸರ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಇದು ಅಪಾರವಾದ ಸಾಧ್ಯತೆಗಳನ್ನು ಹೊಂದಿದೆ,ನಿಮ್ಮ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಈ ಅವಕಾಶಗಳನ್ನು ಸರಕಾರದ ಮುಂದಿಡಲು ಬಯಸುತ್ತೇನೆ ಎಂದು ಮನವಿ ಮಾಡಿರುವುದಲ್ಲದೆ ಈ ಪ್ರದೇಶದ ಜವಾಬ್ದಾರಿಯುತ ಮತ್ತು ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಅವರು ಭರವಸೆ ನೀಡಿದ್ದಾರೆ.






