ಅಪರೂಪದಲ್ಲಿ ಕಾಣಸಿಕ್ಕ ಬಸವ!

Picture of Namma Bedra

Namma Bedra

Bureau Report

ಬಸವ. ತುಳುನಾಡಿನಲ್ಲಿ ಈ ಹೆಸರು ಚಿರಪರಿಚಿತ. ಹಿಂದೆಲ್ಲಾ ಕೆಲವು ದೇವಸ್ಥಾನಗಳಿಗೆ ಸಂಬಂಧಿಸಿ ಒಂದೊಂದು ಬಸವ ಇರುತ್ತಿತ್ತೆಂದು ಹಿರಿಯರು ನೆನಪಿಸುತ್ತಾರೆ.
ಈ ಬಸವನೊಂದಿಗೆ ಪ್ರತೀ ಮನೆ ಮನೆಗಳಿಗೆ ಬರುತ್ತಿದ್ದರು. ಈಗ ಅದು ಅಪರೂಪವಾಗಿ ಬೆರಳೆಣಿಕೆಯಲ್ಲಿ ಮಾತ್ರ ಇದೆ.
ಹರಿಕೆಯ ರೂಪದಲ್ಲಿ ಈ ಬಸವನನ್ನು ದೇವಸ್ಥಾನಕ್ಕೆ ಬಿಡುತ್ತಿದ್ದರು. ಅದನ್ನು ಬೇರೆಯವರೇ ಜೋಪಾನದಿಂದ ಸಾಕುತ್ತಾರೆ. ಮೂಡುಕೊಣಾಜೆಯ ಸಂಜೀವ ನಾಯ್ಕ್ ಮತ್ತವರ ಮಗ ವಿಠಲ ನಾಯ್ಕ್ ಕಳೆದ ಕೆಲ ವರ್ಷಗಳಿಂದ ಸಾಕುತ್ತಿದ್ದಾರೆ.ಅದರ ಖರ್ಚಿಗಾಗಿ ಊರ ಕೆಲವು ಮನೆಗಳಿಗೆ ಅದೇ ಬಸವನೊಂದಿಗೆ ಹೋಗುತ್ತಾರೆ.
ದೀಪಾವಳಿ ಹಬ್ಬದ ದಿನ ಕಾಣ ಸಿಕ್ಕ ಈ ಬಸವ ಮೂಡುಕೊಣಾಜೆ ಮೇಕಾರು ದೇವಸ್ಥಾನ ಹಾಗೂ ದರೆಗುಡ್ಡೆ ದೇವಸ್ಥಾನಕ್ಕೆ ಸಂಬಂಧಿಸಿದ್ದೆಂದು ವಿಠಲ ನಾಯ್ಕ್ ಹೇಳುತ್ತಾರೆ.
ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಇಂತಹ ಬಸವಗಳಿಗೆ ಮೈಮೇಲೆ ಆವೇಶ ಬರುವುದೂ ಇದೆ.ಈ ಅಪರೂಪದ ಬಸವನನ್ನು ನೋಡಲು ಮಕ್ಕಳು ಮುಗಿಬೀಳುತ್ತಾರೆ.ಹಿರಿಯರೂ ಭಕ್ತಿಯಿಂದ ಪ್ರೋತ್ಸಾಹಿಸುತ್ತಾರೆ.
ಚಿತ್ರ: ಬಿ.ಕೆ.ರಶೀದ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top