ನ.8 ರಂದು ಯಕ್ಷನಿಧಿ ಮೂಡುಬಿದಿರೆ ‘ದಶಮ ಸಂಭ್ರಮ’

Picture of Namma Bedra

Namma Bedra

Bureau Report

ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಯುವ ಮೇಳವಾಗಿರುವ ಶ್ರೀ ಯಕ್ಷನಿಧಿ ಮೂಡುಬಿದಿರೆಯ ‘ದಶಮ ಸಂಭ್ರಮ’ವು ನ.8 ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಯಕ್ಷನಿಧಿ ಸ್ಥಾಪಕಾಧ್ಯಕ್ಷ ಶಿವಕುಮಾರ್ ಮೂಡುಬಿದಿರೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ‘ ಸಂಸ್ಥೆ ಬೆಳೆದು ಬಂದ ಹಾದಿ, ವಿದ್ಯಾರ್ಥಿಗಳ ಸಾಧನೆ, ತರಬೇತಿ’ ಕುರಿತು ಮಾಹಿತಿ ನೀಡಿದರು.
ನ.8 ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು ಉದ್ಯಮಿ ಕೆ.ಶ್ರೀಪತಿ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ಡಾ.ಎಂ.ಮೋಹನ ಆಳ್ವ,ಮಾಜಿ ಸಚಿವ ಕೆ.ಅಭಯಚಂದ್ರ, ಚೌಟರ ಅರಮನೆಯ ಕುಲದೀಪ್ ಎಂ, ಮಿಥುನ್ ರೈ, ಸುದರ್ಶನ ಎಂ, ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಟೀಲು ಮೇಳದ ಕಲಾವಿದರಾದ ಅಶೋಕ್ ಆಚಾರ್ಯ ವೇಣೂರು ಅವರಿಗೆ ‘ ಶ್ರೀ ಯಕ್ಷನಿಧಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.ಉದ್ಯಮಿ ಶ್ರೀಪತಿ ಭಟ್, ವಾಸ್ತು ಮತ್ತು ಜ್ಯೋತಿಷಿ ರಾಮಚಂದ್ರ ಆಚಾರ್ಯ, ಜೈನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾತ್ ಬಲ್ಲಾಡ್ ಹಾಗೂ ಕಂಬಳ ಕೋಣದ ಯಜಮಾನರಾದ ಗಣೇಶ್ ನಾರಾಯಣ ಪಂಡಿತ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ದಿವಾಕರದಾಸ್ ಕಾವಳಕಟ್ಟೆ, ರಾಜಾರಾಮ್ ನಾಗರಕಟ್ಟೆ,ನರೇಶ್ ಶೆಟ್ಟಿ ಬರಕಲಗುತ್ತು,ರವಿಪ್ರಸಾದ್ ಶೆಟ್ಟಿ ಲಾಡಿ,ವಿದುಷಿ ಸುಖದಾ ಬರ್ವೆ,ಕಟೀಲು ಮೇಳದ ಭಾಗವತರಾದ ಶ್ರೀನಿವಾಸ ಬಳ್ಳಮಂಜ,ಬಾಲಕೃಷ್ಣ ಭಟ್ ಪುತ್ತಿಗೆ,ಶ್ರೀಮತಿ ಲತಾ ಸುರೇಶ್, ಹರಿಶ್ಚಂದ್ರ ಕುಲಾಲ್,ಎ.ಎಸ್.ಐ.ರಾಜೇಶ್ ರಾವ್, ಯಕ್ಷಗಾನ, ರಂಗ ಕಲಾವಿದ ಪ್ರತೀಕ್ ಸಾಲ್ಯಾನ್ ಮೂಡುಬಿದಿರೆ ಹಾಗೂ ಶ್ರೀಮತಿ ಪ್ರೇಮ ಬಂಗೇರ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮವಿದೆಯೆಂದು ತಿಳಿಸಿದರು.
ಯಕ್ಷನಿಧಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಎಸ್ಸೆಸ್ಸೆಲ್ಸಿ ,ಪಿಯುಸಿ ಸಾಧಕರಿಗೆ ಪುರಸ್ಕಾರ ಕಾರ್ಯಕ್ರಮವಿದ್ದು ಆ ಇಡೀದಿನದ ಕಾರ್ಯಕ್ರಮದಲ್ಲಿ ಯಕ್ಷನಿಧಿ ವಿದ್ಯಾರ್ಥಿಗಳಿಂದ ಹೈಮಾವತಿ,ವಿದ್ಯುನ್ಮತಿ,ಪದ್ಮಾವತಿ ಹಾಗೂ ಚಂದ್ರಮತಿ ಎಂಬ ಯಕ್ಷಗಾನ ನಡೆಯಲಿದೆ ಎಂದರು.
ಯಕ್ಷನಿಧಿ ಅಧ್ಯಕ್ಷೆ ಲತಾ ಸುರೇಶ್,ಉಪಾಧ್ಯಕ್ಷ ಹರಿಶ್ಚಂದ್ರ ಕುಲಾಲ್, ಕಾರ್ಯದರ್ಶಿ ಪ್ರತೀಕ್ ಸಾಲ್ಯಾನ್, ಆದರ್ಶ್ ವಿ.ಎ , ಪ್ರದ್ಯುನ್ನ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top