ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಶ್ರೀನಾಥ್ ಸುವರ್ಣ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಡುಮಾರ್ನಾಡು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಮಾತ್ರವಲ್ಲದೆ ಸಹಕಾರಿ ಕ್ಷೇತ್ರದಲ್ಲೂ ಅವರು ಸೇವೆ ಸಲ್ಲಿಸಿ ಬೆಳುವಾಯಿ ಪರಿಸರದಲ್ಲಿ ಜನಪ್ರಿಯರಾಗಿದ್ದರು.
ಸಾಧು ಸ್ವಭಾವದವರಾಗಿದ್ದ ಅವರಿಗೆ ಬೇರಾವ ಚಟಗಳು ಇರಲಿಲ್ಲ.ಬೆಳುವಾಯಿಯಲ್ಲಿ ಸುವಿಧ್ ಪೆಟ್ರೋಲ್ ಪಂಪ್ ಹೊಂದಿದ್ದ ಅವರಿಗೆ ವ್ಯವಹಾರದಲ್ಲಿ ನಷ್ಟವಾಗಿರುವುದೇ ಆತ್ಮಹತ್ಯೆಗೆ ಕಾರಣವೆನ್ನಲಾಗುತ್ತಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.






