ಇದು ಮೂಡುಬಿದಿರೆ ತಾಲೂಕು ಕಚೇರಿಯಲ್ಲಿ ಮೊದಲ ಮಹಡಿಯಲ್ಲೇ ಕಾಣಸಿಗುತ್ತದೆ.ಕೈತಲ್ ಹೋಗಿ ನೋಡಿದಾಗಲೇ ಗೊತ್ತಾಗೋದು ಇದು ಶುದ್ಧವೋ, ಪರಿಶುದ್ಧವೋ ಎಂದು.
ದಿನಕ್ಕೆ ಅದೆಷ್ಟೋ ಜನರು ಬರುತ್ತಾರೆ ಇಲ್ಲಿಗೆ. ಬಂದವರಿಗೆ ಕುಡಿಯಲು ನೀರು ಇರಲಿ ಎಂಬ ಕಲ್ಪನೆಯೊಂದಿಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಇಲ್ಲೊಂದು ನೀರಿನ ಘಟಕದ ವ್ಯವಸ್ಥೆ ಮಾಡಿಸಿದ್ದರು.

ಆದರೆ ಅದನ್ನು ತಿಂಗಳಿಗೊಮ್ಮೆ ಬಿಡಿ, ವರ್ಷಕ್ಕೊಮ್ಮೆಯಾದರೂ ನೋಡಿ ಕ್ಲೀನ್ ಮಾಡಿಸುವ ವ್ಯವಸ್ಥೆ ಮಾಡಬೇಕಲ್ಲವೇ ? ಅದನ್ನೂ ಶಾಸಕರೇ ಮಾಡಿಸಬೇಕಾ ?
ಇಲ್ಲಿನ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಕಣ್ಣಿಗೇಕೆ ಇದು ಕಂಡಿಲ್ಲ ?
ಈ ನೀರನ್ನು ಕುಡಿದರೆ ಪಕ್ಕದಲ್ಲೇ ಇರುವ ಧರ್ಮಾಸ್ಪತ್ರೆಗೆ ಹೋಗಬೇಕು ಖಂಡಿತ. ಸುಂದರ ಕಟ್ಟಡವನ್ನು ದಿನಂಪ್ರತಿ ಸುಂದರಗೊಳಿಸುವಾಗ ಇದನ್ನೂ ಸುಂದರಗೊಳಿಸಬೇಕಿತ್ತು. ಯಾರೂ ಆ ಕೆಲಸವನ್ನು ಮಾಡಿಲ್ಲ.ಹಾಗಂತ ಇಲ್ಲಿನ ಅವ್ಯವಸ್ಥೆಗೆ ಇಲ್ಲಿನ ಎಲ್ಲಾ ಸಿಬ್ಬಂದಿಗಳೇ ಕಾರಣ .






