ಅಭಿಜಿತ್ ಎಂ.ಅವರಿಗೆ ‘ಸಮಗ್ರ ಸಾಧಕ’ ಪ್ರಶಸ್ತಿ *ನನ್ನ ಯಶಸ್ಸು ನನ್ನ ತಂಡದ್ದು: ಅಭಿಜಿತ್

Picture of Namma Bedra

Namma Bedra

Bureau Report

ಮೂಡುಬಿದಿರೆ ಕೋ-ಅಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ ನಡೆಯುತ್ತಿರುವ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಉದ್ಯಮಿ,ಪದ್ಮಶ್ರೀ ಏಜೆನ್ಸೀಸ್ ಮಾಲಕ ಅಭಿಜಿತ್ ಎಂ.ಅವರಿಗೆ ‘ ಸಮಗ್ರ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಭಿಜಿತ್ ಅವರು ‘ ಉದ್ಯಮದಲ್ಲಿ ಯಶಸ್ಸು ಎಂದರೆ ಎಲ್ಲ ಜವಾಬ್ಧಾರಿಗಳನ್ನು ತಾನೇ ನಿರ್ವಹಿಸುವುದಲ್ಲ,ಅರ್ಹ ವ್ಯಕ್ತಿಗಳನ್ನು ಅರ್ಹ ಸ್ಥಾನಕ್ಕೆ ನಿಯುಕ್ತಿಗೊಳಿಸುವುದರಿಂದ ಯಶಸ್ಸು ಸಾಧ್ಯ, ನನ್ನ ಯಶಸ್ಸು ನನ್ನ ತಂಡದ್ದು’ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಜೈನ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾತ್ ಬಲ್ನಾಡ್,ಚೌಟರ ಅರಮನೆಯ ವೀರೇಂದ್ರ ಕುಮಾರ್,ಸೊಸೈಟಿ ಉಪಾಧ್ಯಕ್ಷ ಗಣೇಶ್ ನಾಯಕ್, ನಿರ್ದೇಶಕರಾದ ಕೆ.ಅಭಯಚಂದ್ರ, ಸಿ.ಎಚ್.ಗಫೂರ್, ಪ್ರೇಮಾ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಗಣೇಶ್ ಕಾಮತ್ ಮತ್ತು ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.ಮಂಜುನಾಥ್ ಅಂಚನ್ ಗೌರವ ಪುರಸ್ಕೃತರ ವಿವರ ನೀಡಿದರು.ಸಂತೋಷ್ ನಾಯಕ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top