ಸುಮಾರು ಐನೂರರಷ್ಟು ನಾಗರಹಾವುಗಳನ್ನು ಮತ್ತು ಇತರ ವಿಷಪೂರಿತ ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡುತ್ತಾ ಜಿಲ್ಲೆಯಲ್ಲಿ ‘ ಸ್ನೇಕ್ ಮಾಸ್ಟರ್’ ಎಂದೇ ಖ್ಯಾತರಾಗಿರುವ ಇಸ್ಮಾಯಿಲ್ ಅಡ್ಡೂರು ಅವರನ್ನು ಫ್ರೆಂಡ್ಸ್ ವಾಲ್ಪಾಡಿ ವತಿಯಿಂದ ಸನ್ಮಾನಿಸಲಾಯಿತು.
ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ಇತ್ತೀಚೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದ ‘ವಾಲ್ಪಾಡಿ ಟ್ರೋಫಿ’ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಬೆದ್ರ ಕ್ರಿಕೆಟ್ ಯೂನಿಯನ್ ಹಾಗೂ ಫ್ರೆಂಡ್ಸ್ ವಾಲ್ಪಾಡಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಬೆದ್ರ ಕ್ರಿಕೆಟ್ ಯೂನಿಯನ್ ಕಾರ್ಯದರ್ಶಿ ವಿಶಾಲ್ ತೋಡಾರ್, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಪುತ್ತಿಗೆ ತಂಡದ ಮಾಲಕ ಮನೋಜ್, ಅಲ್ತಾಫ್ ಮೂಡುಬಿದಿರೆ, ಸಲೀಮ್ ಮಕ್ಕಿ, ಅಝೀಝ್ ಮಕ್ಕಿ, ಸಿದ್ದೀಕ್ ಗಂಟಾಲ್ಕಟ್ಟೆ, ರಶೀದ್ ವಾಲ್ಪಾಡಿ, ಆಕಾಶ್ ಕೊಕ್ರಾಡಿ, ದಾವೂದ್ ಮಕ್ಕಿ,ರಮೀಝ್ ವಾಲ್ಪಾಡಿ, ಸಮೀರ್ ವಾಲ್ಪಾಡಿ ,ಅಶ್ಫಾಹ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





