ಎಪ್ರಿಲ್ 9 ರಿಂದ ‘ಬೆದ್ರೋತ್ಸವ’ *ಸಮಾಲೋಚನಾ ಸಭೆ

Picture of Namma Bedra

Namma Bedra

Bureau Report

ಎಪ್ರಿಲ್ 9ರಿಂದ ಮೂಡುಬಿದಿರೆಯಲ್ಲಿ ನಡೆಯಲಿರುವ ‘ಬೆದ್ರೋತ್ಸವ’ ದ ಪೂರ್ವಭಾವಿ ಸಭೆ ಶಾಸಕ,ಬೆದ್ರೋತ್ಸವ ಸಮಿತಿಯ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಕನ್ನಡಭವನದಲ್ಲಿ ನಡೆಯಿತು.
ಎಪ್ರಿಲ್ 9 ರಿಂದ 12 ತಾರೀಕಿನವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಇದೇ ಮೊದಲಬಾರಿಗೆ ನಡೆಯಲಿರುವ ಈ ಬೆದ್ರೋತ್ಸವವು ಅಚ್ಚುಕಟ್ಟಾಗಿ ನಡೆಯಲು ಶಾಸಕರು ಸಲಹೆ ನೀಡಿದರು.
ಮುಖ್ಯವಾಗಿ ಆಹಾರಮೇಳ,ಅಮ್ಯೂಸ್ಮೆಂಟ್,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವ ಈ ಉತ್ಸವದಲ್ಲಿ ಸುಮಾರು 150 ರಷ್ಟು ಮಳಿಗೆಗಳು ಇರಲಿದೆ, ಬೇರೆಬೇರೆ ಬಗೆಗಳ ಆಹಾರ ಮಳಿಗೆಗಳು,ಇತರ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಆಟಿಕೆ ಮಳಿಗೆಗಳು, ಅಮ್ಯೂಸ್ಮೆಂಟ್ ಬೆದ್ರಕ್ಕೊಂದು ಹೊಸ ಅನುಭವ ನೀಡಬೇಕು, ಆಹಾರಗಳಲ್ಲಿ ಧೂಳು ಮೆತ್ತಿಕೊಳ್ಳದಂತೆ ಕ್ರಮಕೈಗೊಳ್ಳಬೇಕು, ಬೆದ್ರ ನಗರ ತುಂಬಾ ದೀಪಾಲಂಕಾರಗೊಂಡು ಇತರರಿಗೆ ಆಕರ್ಷಣೀಯವಾಗಬೇಕು,ಇದು ನಾವು ಒಂದಿಬ್ಬರು ಸೇರಿ ಮಾಡುವ ಉತ್ಸವವಲ್ಲ, ಬೆದ್ರದ ಸರ್ವಜನರೂ ಸೇರಿಕೊಂಡು ಮಾಡಿ ಸರ್ವರ ಉತ್ಸವವಾಗಬೇಕೆಂದು ಉಮಾನಾಥ ಕೋಟ್ಯಾನ್ ಅವರು ಸಲಹೆ ನೀಡಿ ಸರ್ವರ ಸಹಕಾರ ಕೋರಿದರು.
ತಹಶಿಲ್ದಾರ್ ಶ್ರೀಧರ್ ಮುಂದಲಮನಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ., ಸುದರ್ಶನ ಎಂ,ಅಬುಲ್ ಅಲಾ ಪುತ್ತಿಗೆ,ಮಹೇಂದ್ರವರ್ಮ,ರಾಜೇಶ್ ನಾಯ್ಕ್, ಅಶ್ವಿನ್ ಪಿರೇರಾ, ಸಮಿತಿ ಸಂಚಾಲಕ ಹರೀಶ್ ದೇವಾಡಿಗ, ನಾಗೇಶ್ ಬಂಗೇರ, ಹರ್ಷವರ್ಧನ ಪಡಿವಾಳ್, ಗೋಪಾಲ್ ಶೆಟ್ಟಿಗಾರ್, ಗಣೇಶ್ ಬಿ.ಅಳಿಯೂರು, ಅಶ್ವಥ್ ಪಣಪಿಲ,ಸುಕೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಸತೀಶ್ ಕೋಟ್ಯಾನ್, ಹನೀಫ್ ರಹ್ಮಾನಿಯಾ,ಸುಧಾಕರ ಶೆಟ್ಟಿ, ನವೀನ್, ದೇಜಪ್ಪ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ನಿಶ್ಮಿತಾ ಟವರ್ಸ್ನಿಂದ ಸ್ವರಾಜ್ಯ ಮೈದಾನದವರೆಗೆ, ಕನ್ನಡಭವನ ರಸ್ತೆಯಿಂದ ಸ್ವರಾಜ್ಯ ಮೈದಾನದವರೆಗೆ ಎರಡೂ ಕಡೆಗಳಲ್ಲಿ ಆಹಾರ ಮಳಿಗೆಗಳು, ಸ್ವರಾಜ್ಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು,ಅಮ್ಯೂಸ್ಮೆಂಟ್ ಹಾಗೂ ಪಾರ್ಕಿಂಗ್ ಗಾಗಿ ಪ್ರತ್ಯೇಕ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top