ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್- ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ ಪಡೆದು ಜಿಲ್ಲೆ, ರಾಜ್ಯಕ್ಕೆ ಕೀರ್ತಿಯನ್ನು ತಂದಿರುವ ಮೂಡುಬಿದಿರೆ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿನಿ, ಕುಪ್ಪೆಪದವು ಹಸನಬ್ಬ- ನಫೀಸಾ ದಂಪತಿಯ ಪುತ್ರಿ ಸಹಳಾಳನ್ನು ವಿಮೆನ್ಸ್ ಇಂಡಿಯಾ ಮೂಮೆಂಟ್ ಮೂಡುಬಿದಿರೆ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಫ್ತಾರ್ ಕೂಟ ನಡೆಸುವುದರ ಮೂಲಕ ಆಚರಿಸಿ ಇದೇ ಸಂದರ್ಭದಲ್ಲಿ ಸಹಳಾಳನ್ನು ಸನ್ಮಾನಿಸಲಾಯಿತು.
ಘಟಕದ ಅಧ್ಯಕ್ಷೆ ಮಿಶ್ರಿಯಾ,ಕಾರ್ಯದರ್ಶಿ ನಸೀಮಾ ಸಿದ್ದಕಟ್ಟೆ,ಪುತ್ತಿಗೆ ಪಂಚಾಯತ್ ಸದಸ್ಯೆ ತಾಹಿರಾ, ವಾಲ್ಪಾಡಿ ಯುನಿಟ್ ಅಧ್ಯಕ್ಷೆ ಆಬಿದಾ, ಕೋಟೆಬಾಗಿಲು ಯುನಿಟ್ ಅಧ್ಯಕ್ಷೆ ಶಮೀಮಾ,ಸದಸ್ಯರಾದ ರೇಷ್ಮಾ,ಝೀನತ್,ಮಾಸುಮ,ಮುಬೀನಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





