ಗಾಳಿಮಳೆಯ ಅಬತ್ತರ – ಮಾಂಟ್ರಾಡಿ ತತ್ತರ ..!

Picture of Namma Bedra

Namma Bedra

Bureau Report

ಗುರುವಾರ ಸಂಜೆ ಬೀಸಿದ ಭಾರೀ ಗಾಳಿಮಳೆಗೆ ಮಾಂಟ್ರಾಡಿ ಪರಿಸರದ ಎರಡು ಮನೆಗಳಿಗೆ ಹಾನಿಯಾಗಿದ್ದು,ಹಲವು ಮರಗಳು ಧರೆಗುರುಳಿದೆ, ಒಂದು ಮನೆಯ ಮೇಲೆ ಮರವೊಂದು ವಾಲಿ ನಿಂತಿದ್ದು ಯಾವುದೇ ಕ್ಷಣದಲ್ಲಿ ಬೀಳುವ ಅಪಾಯದಲ್ಲಿದೆ.

ಇಂದಿರಾ ನಗರದ ನಝೀರ್ ಎಂಬವರ ಮನೆಯ ಮೇಲೆ ಮರವೊಂದು ವಾಲಿ ನಿಂತಿದ್ದು ಮನೆಯ ಮೇಲೆ ಬೀಳುವ ಅಪಾಯದಲ್ಲಿದೆ.
ಕೊಟ್ಟಿಬೆಟ್ಟು ವಿಜಯ ಎಂಬವರ ಮನೆಯ ಮೇಲ್ಛಾವಣಿಯ ಶೀಟುಗಳು ಗಾಳಿಗೆ ಹಾರಿ ಹೋಗಿದ್ದು ನೆಲ್ಲಿಕಾರು ಗ್ರಾಮದ ಅಣ್ಣು ಕೊರಗ ಅವರ ಮನೆಯ ಮೇಲೆ ಮರ ಬಿದ್ದು ಮನೆ ಹಾಗೂ ಶೌಚಾಲಯಕ್ಕೆ ಹಾನಿಯಾಗಿದೆ.


ಸಂಜೆ ಬೀಸಿದ ಭಯಂಕರ ಗಾಳಿಗೆ ಹಲವು ಮರಗಳು ಧರೆಗುರುಳಿದ್ದು ಈ ಭಾಗದ ಜನರು ಭಯಭೀತರಾಗಿದ್ದಾರೆ.
ಶಿರ್ತಾಡಿ, ವಾಲ್ಪಾಡಿ ಪರಿಸರದಲ್ಲೂ ಭಾರೀ ಗಾಳಿಮಳೆಯೊಂದಿಗೆ ಸಿಡಿಲು ಮಿಂಚು ಕೂಡಾ ಜೋರಾಗಿಯೇ ಬಂದು ಆರಂಭದಲ್ಲೇ ಮಳೆಗಾಲ ಭರ್ಜರಿಯಾಗಿ ಎಂಟ್ರಿಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top