ಆನೆಗುಡ್ಡೆ,ಅಗರಿ ಪ್ರದೇಶದಲ್ಲಿ ಗಾಳಿ ಮಳೆಗೆ ಅಪಾರ ಪ್ರಮಾಣದ ಕೃಷಿ ಹಾನಿ *30 ಲಕ್ಷಕ್ಕೂ ಅಧಿಕ ನಷ್ಟ

Picture of Namma Bedra

Namma Bedra

Bureau Report

ಮೂಡುಕೊಣಾಜೆ ಸಮೀಪದ ವಾಲ್ಪಾಡಿ ಗ್ರಾಮದ ಆನೆಗುಡ್ಡೆ, ಅಗರಿ ಪ್ರದೇಶದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದ್ದು ಸುಮಾರು 30 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


ಸಂತೋಷ್ ಸಲ್ದಾನ್ಹ, ಲೀನಾ ಸಲ್ದಾನ್ಹ ಹಾಗೂ ನಾಬರ್ಟ್ ಪಿರೇರ ಅವರ ತೋಟಗಳಿಗೆ ಭಾರೀ ಹಾನಿಯಾಗಿದ್ದು 500 ಅಡಿಕೆ ಮರಗಳು, 20 ತೆಂಗಿನ ಮರಗಳು ಹಾಗೂ 1000 ರಬ್ಬರ್ ಮರಗಳು ನೆಲಸಮವಾಗಿದೆ.
ಆರು ವಿದ್ಯುತ್ ಕಂಬಗಳು ಧರೆಗುರುಳಿದ್ದು ಮನೆ, ದನದ ಕೊಟ್ಟಿಗೆ ಹಾಗೂ ರಬ್ಬರ್ ಶೆಡ್ ಗೆ ಹಾನಿಯಾಗಿದೆ.


ಹಲವು ವರುಷಗಳ ಕಠಿಣ ಪರಿಶ್ರಮದ ಫಲವಾಗಿ ಬೆಳೆದಿದ್ದ ಕೃಷಿ ಕ್ಷಣಾರ್ಧದಲ್ಲಿ ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲಿಸಿ ಸರಕಾರದಿಂದ ಪರಿಹಾರ ಒದಗಿಸಿಕೊಡುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top