ವಾಲ್ಪಾಡಿ: ಪಾಳುಬಿದ್ದ ಮನೆಯಲ್ಲಿ ಅನಾಥ ಶವ ಪತ್ತೆ

Picture of Namma Bedra

Namma Bedra

Bureau Report

ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ಸತ್ತು ಮೂರ್ನಾಲ್ಕು ದಿವಸಗಳ ಅಂದಾಜಿನಲ್ಲಿ ಕೊಳೆತು ದುರ್ನಾಥ ಬೀರುತ್ತಿದೆ.
ನೆರೆಮನೆಯವರೊಬ್ಬರ ನಾಯಿಯೊಂದು ಕಾಣೆಯಾಗಿದ್ದು ಅದೇ ನಾಯಿ ಸತ್ತು ದುರ್ನಾಥ ಬೀರುತ್ತಿರಬಹುದೆಂದು ಹುಡುಕಾಡುತ್ತಾ ಹೋದಾಗ ಈ ಶವ ಪತ್ತೆಯಾಗಿದೆ.


ಕೇರಳ ಮೂಲದ ಚೇಟ ಎಂಬಾತ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಸಂಜೆ ಕುಡಿದು ಅಲ್ಲಲ್ಲಿ ಮಲಗುತ್ತಿದ್ದ. ಆತನದ್ದೇ ಶವವೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೂಡುಬಿದಿರೆ ಎಸ್‌.ಐ.ಪ್ರತಿಭಾ ಅವರು ಭೇಟಿ ನೀಡಿದ್ದು ತ‌ನಿಖೆ ಮುಂದುವರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top