ಮೊಬೈಲ್ ಮೂಲಕವೇ ಚಿತ್ತೀಕರಣ ನಡೆಸಿ ಎಡಿಟಿಂಗ್, ಸೌಂಡ್ಸ್ ನೊಂದಿಗೆ ಶಾರ್ಟ್ ಫಿಲ್ಮೊಂದನ್ನು ತಯಾರಿಸಿದ ಬೆಳ್ತಂಗಡಿಯ ಯುವಕರು ಸಖತ್ ಸುದ್ದಿಯಾಗಿದ್ದಾರೆ.
Find ಹೆಸರಿನ ಈ ಚಿತ್ರವು ‘ಪ್ರತಿಯೊಬ್ಬ ಮನುಷ್ಯರಲ್ಲೂ ದೇವರನ್ನು ಕಾಣುವ ಹಂಬಲವಿರುತ್ತದೆ, ಪ್ರತಿಯೊಬ್ಬ Ordinary ಕೂಡಾ ಮಕ್ಕಳಿಗೆ ಉತ್ತಮ ಸಮಯ ನೀಡಬೇಕೆ’ಂಬ ಒಳ್ಳೆಯ ಸಂದೇಶವನ್ನು ಹೊಂದಿದ್ದು ಪ್ರೇಕ್ಷಕರಿಂದ ಉತ್ತಮ ಪ್ರಶಂಸೆಗಳು ವ್ಯಕ್ತವಾಗಿದೆ.
ತಾಯಿ ಮತ್ತು ಮಗನ ಸುತ್ತ ಹೆಣೆಯಲಾದ ಚಿತ್ರವು ಕೊನೆಯವರೆಗೂ ಪ್ರೇಕ್ಷಕರನ್ನು ಅಲ್ಲಾಡದಂತೆ ಮಾಡುತ್ತದೆ.
ಶಾರ್ಟ್ ಫಿಲ್ಮ್ ಗೆ ಏನೆಲ್ಲಾ ಬಳಸಬೇಕೋ ಅದನ್ನೆಲ್ಲಾ ಮೊಬೈಲ್ ನಲ್ಲೇ ಮಾಡಿ ಹೀಗೂ ಶಾರ್ಟ್ ಫಿಲ್ಮ್ ನಿರ್ಮಾಣ ಮಾಡಬಹುದೆನ್ನುವುದನ್ನು ಬೆಳ್ತಂಗಡಿ ಯುವಕರು ತೋರಿಸಿಕೊಟ್ಟಿದ್ದಾರಲ್ಲದೆ ಒಂದು ಅಭೂತಪೂರ್ವ ಸಾಧನೆ ಮೂಲಕ ಗಮನಸೆಳೆದಿದ್ದಾರೆ.

ಅಲಾನ್ ಫ್ರಾನ್ಸಿಸ್ ಅವರ ಕಥೆ,ಸಂಕಲನ, ನಿರ್ದೇಶನದ ಈ ಚಿತ್ರದಲ್ಲಿ ನಿಯಾನ್, ಡೆರಿನ್ ಅಲ್ಫೋನ್ಸ್ ಜೋಸ್,ಅಂಜಲಿ ಎಸ್.ಕೆ, ಲಿಜಿ,ಫಾ.ಬಿಜು ಮುಂತಾದವರು ಈ ಚಿತ್ರದಲ್ಲಿ ಮಿಂಚಿದ ಕಲಾವಿದರು.
ಮ್ಯಾಜಿಕ್ ಟೆಚ್ ಫಿಲ್ಮ್ಸ್ ಚಾನೆಲ್ ಅಡಿಯಲ್ಲಿ ಈ ಚಿತ್ರವು ಯೂ ಟ್ಯೂಬ್ ನಲ್ಲಿ ಬಿಡುಗಡೆ ಹೊಂದಿರುತ್ತದೆ.
ಅಂದಹಾಗೆ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಮಿಂಚಿರುವ ಕಲಾವಿದೆ ಅಂಜಲಿ ಎಸ್.ಕೆ.ಅವರು ದ.ಕ.ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ (ಹಿಂದೆ ಮೂಡುಬಿದಿರೆಯಲ್ಲಿದ್ದರು) ಸೋನ್ ಶಾ ಕೆ.ಜಿ- ರೀಸಾ ದಂಪತಿಯ ಪುತ್ರಿ.
ಈಕೆ ಕಾನೂನು ವಿದ್ಯಾರ್ಥಿನಿಯಾಗಿದ್ದು ಭರತನಾಟ್ಯ ಕಲಾವಿದೆಯೂ, ಡ್ಯಾನ್ಸ್ ಕೊರಿಯೊಗ್ರಾಫರ್ ಕೂಡಾ ಆಗಿದ್ದಾರೆ. ಆಗಿದ್ದಾರೆ.






