ಅಳಿಯೂರು ಹೈಸ್ಕೂಲ್ ನಲ್ಲಿ ಶಾಲಾ ಪ್ರಾರಂಭೋತ್ಸವ. ಮರದ ಕಲಾಕೃತಿಗೆ ಚಿಟ್ಟೆ ಹಕ್ಕಿಗಳನ್ನು ಜೋಡಿಸುವ ಮೂಲಕ ಉದ್ಘಾಟನೆ

Picture of Namma Bedra

Namma Bedra

Bureau Report

ಇದೊಂದು ವಿಶಿಷ್ಟ ರೀತಿಯ ಉದ್ಘಾಟನೆ. ಎಲ್ಲ ಕಡೆ ಭಿನ್ನ ರೀತಿಯಲ್ಲಿ ಈ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಉದ್ಘಾಟಿಸಿದರೆ ಅಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಮರದ ಕಲಾಕೃತಿಗೆ ಚಿಟ್ಟೆ ಹಕ್ಕಿಗಳನ್ನು ಜೋಡಿಸುವ ಮೂಲಕ ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟಿಸಲಾಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷ ರವೀಂದ್ರ ಅವರು ಜತೆಗೂಡಿ ಉದ್ಘಾಟಿಸಿದರು.
‌ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹೂ ನೀಡಿ ಸ್ವಾಗತಿಸಲಾಯಿತು.
ಪೋಷಕರ ಮಹಾಸಭೆ, ಪುಸ್ತಕ ವಿತರಣೆ ನಡೆಯಿತು.
ನೂತನ ಮುಖ್ಯೋಪಾಧ್ಯಾಯ ಪದ್ಮನಾಭ ಅವರು ಸ್ವಾಗತಿಸಿ ಚಿತ್ರಕಲಾ ಶಿಕ್ಷಕಿ ರಂಜನಾ ವಂದಿಸಿದರು. ಗಣಿತ ಶಿಕ್ಷಕಿ ಡಾ.ಆನಿ ಡಿಂಪಲ್ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ಪದ್ಮಿನಿ, ವಿದ್ಯಾ ಸಂದೀಪ್ ನಾಯಕ್, ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top