ಮೂಡುಬಿದಿರೆ ಪುರಸಭಾ ಕಚೇರಿ ಎದುರಿನ ಫಾರ್ಚೂನ್ ನೀತಿ ಹೈಟ್ಸ್ ನಲ್ಲಿ ನೂತನವಾಗಿ ಆರಂಭಿಸಿದ ಅಸಾವರಿ ಸಿಲ್ಕ್ಸ್ ಮಳಿಗೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ, ಉದ್ಯಮಿ ನಾರಾಯಣ ಪಿ.ಎಂ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಡಾ.ಗ್ರೀಶ್ಮಾ ವಿವೇಕ್ ಆಳ್ವ, ಕೆ.ಜಯೇಶ್ ಬಲ್ಲಾಳ್, ಮಹೇಂದ್ರ ವರ್ಮ ಜೈನ್, ಶೋಭಾ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಮಗೇಶ್ವರಿ, ಯೋಗೀಶ್ ಹಾಗೂ ದಿವ್ಯಾ ಅವರು ಭಾಗವಹಿಸಿದವರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.






