ಹೊಸ್ಮಾರಿನ ಜನಪ್ರಿಯ ವ್ಯಾಪಾರಿ ‘ಅಣ್ಣಾಜೆರ್’ ಇನ್ನಿಲ್ಲ!

Picture of Namma Bedra

Namma Bedra

Bureau Report

‘ಅಣ್ಣಾಜೆರ್’ ಎಂದೇ ಹೊಸ್ಮಾರು ಪರಿಸರದಲ್ಲಿ ಜನಪ್ರಿಯರಾಗಿದ್ದ ವ್ಯಾಪಾರಿ ಪ್ರೇಮ್ ಕುಮಾರ್ ಅವರು ಕಳೆದ ರಾತ್ರಿ ನಿಧನರಾಗಿದ್ದಾರೆ.
ತಾಲೂಕು ಪಂಚಾಯತ್ ಸದಸ್ಯರಾಗಿ, ಕೃಷಿಕರಾಗಿ,ಸಾಮಾಜಿಕ ಸೇವಕನಾಗಿ,ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ಅದೆಷ್ಟೋ ಅಶಕ್ತರಿಗೆ,ಅಸಹಾಯಕರಿಗೆ ನೆರವಾಗಿದ್ದವರು. ಸರಕಾರಿ ಶಾಲೆಗಳಿಗೂ ಬೇರೆ ಬೇರೆ ರೀತಿಯ ಕೊಡುಗೆಗಳನ್ನು ನೀಡಿದ್ದರು.
ಇದೇ ಕಾರಣದಿಂದ ಸಮಾಜದ ಸರ್ವ ಧರ್ಮೀಯರೂ ಅವರನ್ನು ಪ್ರೀತಿಯಿಂದ ‘ ಅಣ್ಣಾಜೆರ್ ‘ ಎಂದು ಕರೆಯುತ್ತಿದ್ದರು.
ತಾಯಿ, ಪತ್ನಿ,ಓರ್ವ ಪುತ್ರಿ,ಅಳಿಯ ,ಮೊಮ್ಮಗ ಹಾಗೂ ಅಪಾರ ಬಂಧು ಬಳಗವನ್ನವರು ಅಗಲಿದ್ದಾರೆ.
ಪುತ್ರಿ ಹಾಸನದಲ್ಲಿ ವೈದ್ಯರಾಗಿದ್ದು ಅದೇ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top