ಪಿದಮಲೆ- ಮಾಂಟ್ರಾಡಿ: ಪಂಚಾಯತ್, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೋಡ್ ಬಂದ್ !

Picture of Namma Bedra

Namma Bedra

Bureau Report

ಮೊದಮೊದಲ ಮಳೆಗೇ ಇದು ರಸ್ತೆಯೋ ,ಕೆಸರುಗದ್ದೆಯೋ ಗೊತ್ತಾಗದೆ ಜೀವಕ್ಕೆ ಸಂಚಕಾರ ಆಗುವ ಮೊದಲೇ ಬಂದ್ ಆದಂತಿದೆ.
ಇದು ವಾಲ್ಪಾಡಿ ಕೊಯಕ್ಕುಡೆ ಚಡಾವಿನಿಂದ ಪಿದಮಲೆ- ಮಾಂಟ್ರಾಡಿಯ ರಸ್ತೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ, ಶಾಸಕರಿಗೆ,ಪಂಚಾಯತ್ ನವರಿಗೆ ಅರ್ಜಿ ನೀಡಿ,ಕೈಮುಗಿದು ಸುಸ್ತಾಗಿ ಹೋಗಿದ್ದ ಊರ ಯುವಕರು,ವಯಸ್ಕರು ಅಂತ ಕೊಟ್ಟು ಪಿಕ್ಕಾಸು ಹಿಡಿದು, ಪೊಯ್ಯೆ ಮಣ್ಣ್ ಅಂತ ತಾವೇ ತಂದು ಹಾಕಿ ರಸ್ತೆಯನ್ನು ಕೊಂಚಮಟ್ಟಿಗೆ ಸರಿಪಡಿಸಿದ್ದರು.ಆದರೆ ಇದೇ ರಸ್ತೆಯಲ್ಲಿ ‘ ಕೈತಲ್ ಆಪುಂಡು’ ಅಂತ ಜನಪ್ರತಿನಿಧಿಗಳ ವಾಹನಗಳು ಹಲವುಬಾರಿ ಅಂಚಿಂಚಿ ಓಡಾಡಿದೆಯಾದರೂ ನಿಲ್ಲಿಸಿ ವಿಚಾರಿಸಿದ ಮಗ ಯಾವೊಬ್ಬನೂ ಇಲ್ಲ.
ಈ ರಸ್ತೆ ಸುತ್ತುಬಳಸಿ ಹೋಗುವುದನ್ನು ತಡೆಯುತ್ತದೆ.ಮಾಂಟ್ರಾಡಿಗೆ ಹೋಗಬೇಕಾದರೆ ಅಥವಾ ಮಾಂಟ್ರಾಡಿಯಿಂದ ಅಳಿಯೂರು,ವಾಲ್ಪಾಡಿಗೆ ಹೋಗಬೇಕಾದರೆ ಬಹಳಷ್ಟು ಹತ್ತಿರ.ತುಂಬಾ ಮನೆಗಳಿವೆ.ಹಲವಾರು ವಾಹನಗಳು ಚಲಿಸುತ್ತದೆ.ತುಂಬಾ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೋಗುತ್ತಾರೆ.


ಆದರೆ, ಮಳೆಬಂದ ಕೂಡಲೇ ರಸ್ತೆ ಕೆಸರುಗದ್ದೆಯಾಗುತ್ತದೆ.ಹಲವು ವಾಹನಗಳು ಜಾಮ್ ಆಗಿ ಮುಂದಕ್ಕೂ ಹೋಗಿಲ್ಲ-ಹಿಂದಕ್ಕೂ ಹೋಗಿಲ್ಲ. ಮೂವರು ವಿದ್ಯಾರ್ಥಿನಿಯರ ಕಾಲು ಕೆಸರಿನೊಳಗೆ ಸಿಕ್ಕಿಕೊಂಡು ರಸ್ತೆಗೆ ಬಿದ್ದು ಗಾಯ ಮತ್ತು ಕೆಸರು ಎರಡನ್ನೂ ಮಾಡಿಕೊಂಡು ವಾಪಾಸು ಮನೆಸೇರಿದ್ದಾರೆ.ಇದೆಲ್ಲಾ ಓಟು ಪಡೆದವರಿಗೆ ಅರ್ಥ ಆಗೋದಾದರೂ ಯಾವಾಗ?
ಅಂತೂ ಇಂತೂ ಯಾರೂ ಕೂಡಾ ಅಪಾಯನ್ನರಿತು ಈ ರಸ್ತೆಯಲ್ಲಿ ಹೋಗಲು ಮನಸ್ಸು ಮಾಡದಿರುವುದರಿಂದ ರಸ್ತೆ ಬಂದ್ ಆದಂತಿದೆ.ಇದು ನಿರ್ಲಕ್ಷ್ಯಕ್ಕೆ ಬಲಿಯಾದ ರಸ್ತೆ.
ದೊಡ್ಡ ಸಂಖ್ಯೆಯಲ್ಲಿ ಇರುವ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬ ಮನಸ್ಸು ಜನಪ್ರತಿನಿಧಿಗಳಿಗೆ,ಜನಪ್ರತಿನಿಧಿಗಳಾಗಬಯಸುವವರಿಗಿದ್ದರೆ ಖಂಡಿತಾ ಈ ರಸ್ತೆಯ ಬಗ್ಗೆ ಕಾಳಜಿ ವಹಿಸುತ್ತಾರೆ, ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top