ಮಾಂಟ್ರಾಡಿ: ಕಾಲುಸಂಕ್ಕೆ ‘ಕಾಲು’ಗಳೇ ಇಲ್ಲ…!

Picture of Namma Bedra

Namma Bedra

Bureau Report

ಇದೊಂದು ಡಿಫರೆಂಟ್. ಮೂಲಭೂತ ಸೌಕರ್ಯಗಳ ಕೊರತೆಯಿಂದ ಮಾಂಟ್ರಾಡಿ ಪರಿಸರ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ.ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೋ, ಅಧಿಕಾರಿಗಳ ಉದಾಸೀನತೆಯೋ ಗೊತ್ತಾಗುತ್ತಿಲ್ಲ.ಅಂತೂ ಇಲ್ಲಿ ಸಮಸ್ಯೆಗಳು ಮಾತ್ರ ಸಾಲು ಸಾಲು ಇದೆ.
ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿಯ ಗುತ್ತಾಪು ಎಂಬಲ್ಲಿ ಹಳೆಯ ಕಾಲು ಸಂಕದ ಕೈಕಾಲು ಮುರಿದು ಬಿದ್ದು ಕೆಲವು ತಿಂಗಳೇ ಕಳೆದಿದೆ.ಆದರೆ ಅಲ್ಲಿನ ಅವಶೇಷಗಳನ್ನು ತೆರವುಗೊಳಿಸದಿರುವುದರಿಂದ ಪಕ್ಕದ ಕೃಷಿ ಭೂಮಿಗೆ ಹಾನಿಯಾಗುತ್ತಿದೆ.
ಸರಿ, ಹಳೆಯ ಕಾಲುಸಂಕ ಮುರಿದು ಬಿದ್ದರೇನಾಯ್ತು? ಪೊಸತ್ ಮಾಡುವ ಎಂದು ಹೊಸ ಕಾಲು ಸಂಕ ನಿರ್ಮಾಣ ಮಾಡಿದ್ದಾರೆ.ಆದರೆ ಅದರಲ್ಲಿ ನಡೆಯಲು ‘ ಕಾಲು’ಗಳೇ ಇಲ್ಲ.ಅಂದರೆ ಅಲ್ಲಿ ದಾರಿ ಇಲ್ಲದೆ ಸಾರ್ವಜನಿಕರ್ಯಾರೂ ಆ ಹೊಸ ಸಂಕವನ್ನು ಬಳಕೆ ಮಾಡುತ್ತಿಲ್ಲ. ಹೊಸ ಸಂಕ ಯಾವ ಪ್ರಯೋಜನಕ್ಕೂ ಬಾರದಂತಾಗಿದೆ.


ಈ ಸಮಸ್ಯೆಗಳಿಗೆ ನೆಲ್ಲಿಕಾರು ಗ್ರಾಮ ಪಂಚಾಯತ್ ಕೂಡಲೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಆಗುವಂತಹ ವ್ಯವಸ್ಥೆ ಮಾಡಬೇಕೆಂದು ಪಂಚಾಯತ್ ಮಾಜಿ ಸದಸ್ಯ ಶಶಿಧರ ಎಂ.ಅವರು ಆಗ್ರಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top