ಮಳೆ ಬಂದರೇ ಮೆಲ್ಲಗೆ…. ಹಳೆ ತೊಂದರೇ ಇಲ್ಲಿಗೆ….!

Picture of Namma Bedra

Namma Bedra

Bureau Report

ಈ ಫೊಟೊವನ್ನು ಸುದತ್ತ ಜೈನ್ ಶಿರ್ತಾಡಿ ಅವರ ವಾಟ್ಸಾಪ್ ಸ್ಟೇಟಸ್ ನಿಂದ ಕದ್ದದ್ದು.
ಇದು ಬೆದ್ರದ ಕಟ್ಟೆಯಬಳಿ ಅಂದರೆ ಹಳೆ ಮಾರ್ಕೆಟ್ ಬಳಿಯದ್ದು. ಈಗ ಹೊಸ ಮಾರ್ಕೆಟ್ ಕಟ್ಟಡ ನಿರ್ಮಾಣವಾಗುತ್ತಿದೆಯಲ್ಲಾ…ಅಲ್ಲಿಯದ್ದು.
ಇಲ್ಲಿನ ಈ ತೊಂದರೆ ನಿನ್ನೆ ಮೊನ್ನೆಯದಲ್ಲ, ಸ್ವಲ್ಪ ಹಳೆಯದ್ದು.
ಮಳೆ ಬರಲು ಪುರುಸೊತ್ತಿಲ್ಲ- ಈ ಜಾಗ ಹೊಳೆಯಂತಾಗುತ್ತದೆ. ನಾಲ್ಕು ದಿಕ್ಕಿನಿಂದಲೂ ನೀರು ಬಂದು ರಸ್ತೆ ದಾಟಲು ಹೊಳೆದಾಟಿದಂತೆ ದಾಟಬೇಕಾಗುತ್ತದೆ.
ಅದಕ್ಕೆ ಸರಿಯಾಗಿ ಮಾರ್ಕೆಟ್ ಕಟ್ಟಡದ ಎದುರಲ್ಲಿ ಸಾಲಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಎಲ್ಲಿಗೋ ಹೋಗುತ್ತಾರೆ.
ಮಳೆ ಬಂದಾಗ ಈ ಪರಿಸರದಲ್ಲಾಗುವ ಕಷ್ಟ ರಸ್ತೆ ದಾಟಿದವರಿಗೆ ಮಾತ್ರ ಗೊತ್ತು. ಯಾವುದಾದರೂ ವಾಹನ ಸ್ವಲ್ಪ ವೇಗವಾಗಿ ಹೋಯಿತೆಂದರೆ ರಸ್ತೆ ಬದಿ ನಿಂತವರು ಚಂಡಿಪುಂಡಿಯಾಗುತ್ತಾರೆ.
ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿರುವ ಈ ಪರಿಸರವನ್ನೊಮ್ಮೆ ಪುರಸಭೆಯವರು ಗಮನಕ್ಕೆ ತೆಗೆದುಕೊಳ್ಳಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top