ಮೂಡುಬಿದಿರೆ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಎಸ್.ಐ.ಆರ್. ಮಾಹಿತಿ ಕಾರ್ಯಾಗಾರ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ಎಸ್.ಐ.ಆರ್.ಕುರಿತ ಮಾಹಿತಿ ಕಾರ್ಯಾಗಾರವನ್ನು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಖ್ಯಾತ ನ್ಯಾಯವಾದಿ ಖಲೀಲುಲ್ಲಾ ಬೆಂಗಳೂರು ಅವರು ಎಸ್.ಐ.ಆರ್.ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು.
ನಸೀಮ್ ಅಖ್ತರ್ ಹಾಗೂ ಜಾಗೃತ ಕರ್ನಾಟಕ ತಂಡದ ನಿಸಾರ್ ಅಹ್ಮದ್ ಅವರು ಈ ಸಂದರ್ಭದಲ್ಲಿ ಭಾಗವಹಿಸಿ ಪೂರಕವಾದ ಮಾಹಿತಿಗಳನ್ನು ನೀಡಿದರು.


ಕಮಿಟಿಯ ಉಪಾಧ್ಯಕ್ಷ ಮಾಲಿಕ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಮರೋಡಿ ಸ್ವಾಗತಿಸಿ ಫಾರೂಕ್ ವಿಶಾಲನಗರ ವಂದಿಸಿದರು. ಕಾರ್ಯದರ್ಶಿ ಇರ್ಷಾದ್ ಎನ್.ಜಿ.ಕಾರ್ಯಕ್ರಮ ನಿರೂಪಿಸಿದರು.
ಸಮಿತಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಜಮಾತಿನ ಪ್ರಮುಖರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top