ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹದಿನೆಂಟನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ‘ ಪರ್ಯಾಯ ರಾಜಕಾರಣದ ಸಕಾರಾತ್ಮಕ ಹೆಜ್ಜೆ’ ಎಂಬ ಧ್ಯೇಯದೊಂದಿಗೆ ಸಂಸ್ಥಾಪನಾ ದಿನಾಚರಣೆಯನ್ನು ಎಸ್.ಡಿ.ಪಿ.ಐ.ಯು ಹಂಡೇಲ್ ಜಂಕ್ಷನ್ ನಲ್ಲಿ ಭಾನುವಾರ ಆಚರಿಸಿಕೊಂಡಿತು.
ಬ್ಲಾಕ್ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಆಸಿಫ್ ಮೂಡುಬಿದಿರೆ, ಉಪಾಧ್ಯಕ್ಷ ಆಸಿಫ್ ಕೋಟೆಬಾಗಿಲು , ಬೂತ್ ಅಧ್ಯಕ್ಷ ಅನ್ವರ್ ಹುಸೇನ್, ಪ್ರಮುಖರಾದ ಫಿರೋಝ್, ಇಬ್ರಾಹಿಂ ಹಂಡೇಲ್, ನಝೀರ್ ಹಂಡೇಲ್, ಆಸಿಫ್ ಹಂಡೇಲ್, ರಫೀಕ್ ಕುವೈಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






