ಕಾಶಿಪಟ್ಣ ಶಾಲೆಗೆ ಸಚಿವ ಖಾದರ್ ಭೇಟಿ

Picture of Namma Bedra

Namma Bedra

Bureau Report

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಸೋಮವಾರ ಕಾಶಿಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಶಾಲಾ ವಿದ್ಯಾರ್ಥಿಗಳು ಸಚಿವರಿಗೆ ಹೂಗುಚ್ಛ ನೀಡಿ ಬ್ಯಾಂಡ್ ಮೂಲಕ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರ ಕುಮಾರ್ ಜೈನ್ ಅವರು ಶಾಲಾ ಕೊಠಡಿಗಾಗಿ ಮನವಿ ನೀಡಿದರು.
ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕೆ, ಎಸ್.ಡಿ.ಎಂ.ಸಿ.ಅಧ್ಯಕ್ಷ ವಿದ್ಯಾನಂದ, ಸದಸ್ಯ ಹಮೀದ್, ಶಿಕ್ಷಕರು, ಗ್ರಾಮಸ್ಥರು ಈ‌ ಸಂದರ್ಭದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top