ಬೆದ್ರಗೊಂಜಿ ಗುಡ್ ನ್ಯೂಸ್ *ನ್ಯೂ ಗಣೇಶ್ ಎಲ್ಲೆ ಓಪನ್ !

Picture of Namma Bedra

Namma Bedra

Bureau Report

ಮೂಡುಬಿದಿರೆ ಬಸ್ಸು ನಿಲ್ದಾಣದಲ್ಲೊಂದು ಸುಸಜ್ಜಿತವಾದ ಸಸ್ಯಾಹಾರಿ ಹೊಟೆಲ್ ಇಲ್ಲದೆ ಜನರಿಗಾಗುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಹೊಟೇಲ್ ನ್ಯೂ ಗಣೇಶ್ ಕಾಫಿ ಹೌಸ್ ನ ಮಾಲಕ ಗಣೇಶ್ ಶೆಟ್ಟಿ ಅವರ ಮಾಲಕತ್ವದ ನ್ಯೂ ಗಣೇಶ್ ಹೊಟೇಲ್ ನಾಳೆ ( 24) ಬೆಳಿಗ್ಗೆ 10 ಗಂಟೆಗೆ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.
ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಧುನಿಕ ವಿನ್ಯಾಸದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಹೊಟೇಲನ್ನು ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಲಿದ್ದಾರೆ.ಶಾಸಕ ಉಮಾನಾಥ ಕೋಟ್ಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು ಮಾಜಿ ಸಚಿವ ಕೆ.ಅಭಯಚಂದ್ರ, ಪಟ್ಲ ಸತೀಶ್ ಶೆಟ್ಟಿ, ಮುಂಬೈ ಉದ್ಯಮಿ ಸುರೇಶ್ ಶೆಟ್ಟಿ ಮಿಜಾರ್, ಕೆ.ಪಿ.ಜಗದೀಶ ಅಧಿಕಾರಿ, ಪುರಸಭಾ ಮಾಜಿ ಸದಸ್ಯ ರಾಜೇಶ್ ನಾಯ್ಕ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಉದ್ಯಮಿ ಮೇಘನಾಥ ಶೆಟ್ಟಿ, ಕೆ.ಪಿ.ಸುಚರಿತ ಶೆಟ್ಟಿ, ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ನಿಹಾಲ್ ತಾವ್ರೊ, ಲ.ಕಿಶೋರ್ ಡಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಮಾಲಕ ಗಣೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top