ಪಡ್ಡಂದಡ್ಕ ಮಸೀದಿಯಲ್ಲಿ ಎಸ್.ಐ.ಆರ್.ಕಾರ್ಯಾಗಾರ *ನ್ಯಾಯವಾದಿ ಇರ್ಷಾದ್ ಎನ್‌.ಜಿ.ಅವರಿಗೆ ಸನ್ಮಾನ

Picture of Namma Bedra

Namma Bedra

Bureau Report

ಪಡ್ಡಂದಡ್ಕ ನೂರುಲ್ ಹುದಾ ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಸ್‌.ಐ.ಆರ್ ಕುರಿತಾದ ಕಾರ್ಯಾಗಾರದಲ್ಲಿ ಮೂಡುಬಿದಿರೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ, ನ್ಯಾಯವಾದಿ ಇರ್ಷಾದ್ ಎನ್.ಜಿ.ಅವರು ಮಾಹಿತಿ ನೀಡಿದರು.
ಜನರ ಸಂಶಯ, ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು ಎಸ್.ಐ.ಆರ್.ಕುರಿತಾದ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಅವರನ್ನು ಮಸೀದಿ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಮಸೀದಿ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಖತೀಬರಾದ ಶಮೀರ್ ದಾರಿಮಿ ದುವಾ ನೆರವೇರಿಸಿದರು.
ಪ್ರಮುಖರಾದ ರಫೀಕ್ ಪಡ್ಡ,ಖಾಲಿದ್ ಪುಲಾಬೆ,ಅಬ್ದುಸ್ಸಲಾಮ್ ಕೇಶವನಗರ,ಶಾಫಿ ಕಿರೋಡಿ,ಅಶ್ರಫ್ ಕಿರೋಡಿ,ಸರ್ಫ್ರಾಝ್ ಪುತ್ತಿಗೆ, ಜಾವೆದ್ ಮಾರೂರು, ಬಿ.ಎಲ್.ಎ.ಗಳಾದ ಅಶ್ರಫ್ ಶಾಂತಿನಗರ,ಹನೀಫ್ ಪೆರಿಂಜೆ, ಇಸ್ಮಾಯಿಲ್ ಹೆಚ್, ಹಮೀದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪತ್ರಕರ್ತ ಎಚ್.ಮುಹಮ್ಮದ್ ವೇಣೂರು ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top