ರಾಷ್ಟ್ರಮಟ್ಟದಲ್ಲಿ ಮಿಂಚಿದ ಮಾರ್ನಾಡಿನ ಕುವರಿಯರು

Picture of Namma Bedra

Namma Bedra

Bureau Report

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ ಅಂಡರ್ 19 ವಿಭಾಗದಲ್ಲಿ ಮಾರ್ನಾಡು ಪರಿಸರದ ಮೂವರು ಯುವತಿಯರು ಸಾಧನೆ ತೋರುವ ಮೂಲಕ ಕಾಲೇಜು ಹಾಗೂ ಊರಿಗೆ ಹೆಸರು ತಂದಿದ್ದಾರೆ.ಮೂವರೂ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಮೂಡುಮಾರ್ನಾಡು ತಂಡ್ರಕೆರೆಯ ವಸಂತ ಪೂಜಾರಿ- ಸುಗುಣಾ ದಂಪತಿಯ ಪುತ್ರಿ ಅನ್ವಿತಾ, ಅಮನೊಟ್ಟುವಿನ ವಿಜಯಶೆಟ್ಟಿ- ಮೀರಾವತಿ ದಂಪತಿಯ ಪುತ್ರಿ ವಿಶ್ಮಿತಾ ಶೆಟ್ಟಿ ಹಾಗೂ ಮುರಗೋಳಿಯ ದಿವಾಕರ ಕಾಮತ್-ಶಕುಂತಳಾ ದಂಪತಿಯ ಪುತ್ರಿ ನಿರ್ಮಲಾ ಕಾಮತ್ ಈ ಸಾಧನೆ ಮಾಡಿದವರು.
ಅನ್ವಿತಾ ಮತ್ತು ನಿರ್ಮಲಾ ಕಾಮತ್ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರಾದರೆ ವಿಶ್ಮಿತಾ ಧವಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ.
ತಮ್ಮೂರಿಗೆ ಕೀರ್ತಿ ತಂದಿರುವ ಈ ಮೂವರು ವಿದ್ಯಾರ್ಥಿನಿಯರಿಗೂ ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮೂಡುಬಿದಿರೆ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top