ಅಬಕಾರಿ ಇಲಾಖೆ: ಖಾಲಿ ‌ಮತ್ತು ಲಭ್ಯವಿರುವ ಸನ್ನದುಗಳಿಗೆ ಅರ್ಜಿ ಆಹ್ವಾನ. *ಮಂಗಳೂರು ಡಿಸಿ (ಅಬಕಾರಿ) ಯಿಂದ ಹರಾಜು ಪ್ರಕಟಣೆ

Picture of Namma Bedra

Namma Bedra

Bureau Report

ಮಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಮತ್ತು ಲಭ್ಯವಿರುವ ಅಬಕಾರಿ ಸನ್ನದುಗಳನ್ನು ನೀಡಲು ಬಿಡ್ಡರ್ ಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಈಬಗ್ಗೆ ಮಂಗಳೂರು ಅಬಕಾರಿ ಇಲಾಖೆಯ ಡೆಪ್ಯುಟಿ ಕಮೀಷನರ್ ಅವರು ಹರಾಜು ಪ್ರಕಟಣೆ ನೀಡಿದ್ದಾರೆ.
ಅಬಕಾರಿ ಇಲಾಖೆಯು ಭಾರತೀಯ ಮದ್ಯ,ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಹೆಚ್ 1 ಬಿಡ್ಡರ್ ಗಳಿಗೆ ಫಾರಂ ಸಿಎಲ್- 2 ಎ ಮತ್ತು ಸಿಎಲ್- 9 ಎ ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಬಿಡ್ಡರ್ ಗಳಿಂದ ಅರ್ಜಿ ಆಹ್ವಾನಿಸಿದ್ದು ಈ ಹರಾಜು ಪ್ರಕ್ರಿಯೆಯು ಇಲಾಖೆಯ ವೆಬ್ ಸೈಟ್ ಮೂಲಕ ನಡೆಯಲಿದೆ.
ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ ನೀಡುವ ವರ್ಷಗಳನ್ನೊಳಗೊಂಡಂತೆ 5 ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ‌.
ಮಂಗಳೂರು ಪೂರ್ವ ವಲಯ -2 (ಮೂಡುಬಿದಿರೆ) ರಲ್ಲಿ ಎರಡು ಸನ್ನದುಗಳಿಗೆ ಅವಕಾಶವಿದೆ.
ಜು.24 ರಿಂದ 31 ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದ್ದು ಆಸಕ್ತರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮೇರಿಹಿಲ್- ಕೊಂಚಾಡಿಯಲ್ಲಿರುವ ಅಬಕಾರಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top