ಹೊಸಂಗಡಿ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾದ! *ಒಂದೇ ದಿನ ಎರಡು ಶವಗಳ ಪತ್ತೆ

Picture of Namma Bedra

Namma Bedra

Bureau Report

ಮೂರು ದಿವಸಗಳ ಹಿಂದೆ ನಾಪತ್ತೆಯಾಗಿದ್ದ ಹೊಸಂಗಡಿ ಪೇರಿ ನಿವಾಸಿ ಕಿಶೋರ್ ಕುಮಾರ್ (31) ಅವರು ಹೊಸಂಗಡಿಯ ಫಲ್ಗುಣಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಇಬ್ಬರು ಅವಿವಾಹಿತರ ಶವ ಪತ್ತೆಯಾಗಿದೆ.ಇಬ್ಬರೂ ನಾಪತ್ತೆಯಾಗಿದ್ದವರು.
ಬೆಳಿಗ್ಗೆ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ ಅವರ ಶವವು ಹನ್ನೆರಡು ಕವಲಿನಲ್ಲಿ ಪತ್ತೆಯಾಗಿದ್ದರೆ ಸಂಜೆ ವೇಳೆಗೆ ಕಿಶೋರ್ ಕುಮಾರ್ ಅವರ ಶವ ಪತ್ತೆಯಾಗಿದೆ.
ಕಿಶೋರ್ ಆತ್ಮಹತ್ಯೆ ಮಾಡಿಕೊಂಡರೋ, ಕಾಲುಜಾರಿ ಬಿದ್ದರೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top