ಅಕ್ಕನ ಮನೆಗೆ ಬಂದವಳು ಗಂಡನ ಪಕ್ಕದ ಮನೆಯವನೊಂದಿಗೆ ಎಸ್ಕೇಪ್ ?

Picture of Namma Bedra

Namma Bedra

Bureau Report

ಸಾಬೀರಾ ಬಾನು. ಜಸ್ಟ್ ಟ್ವೆಂಟಿ. ಎರಡು ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ರಾಜಶೇಖರ ಟಾಕೀಸು ಹಿಂಭಾಗದ ಮನೆಯ ಅಶ್ಫಾಕ್ ಎಂಬವನೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು.
ಮದುವೆಯಾದ ನಂತರ ಮೂಡುಬಿದಿರೆ ಸಮೀಪದಲ್ಲಿರುವ ತನ್ನ ಅಕ್ಕನ ಮನೆಗೆ ಬರುತ್ತಿದ್ದಳು.ಮೊನ್ನೆ ಮೊನ್ನೆಯೂ ಒಮ್ಮೆ ಬಂದಿದ್ದಳು‌.ಅಕ್ಕ ತನ್ನ ಸಂಬಂಧಿಕರ ಮನೆಗೆ ಹೋಗಿ ವಾಪಾಸು ಬರುವಷ್ಟರಲ್ಲಿ ಸಬೀರಾ ಬಾನು ಮನೆಯಲ್ಲಿರಲಿಲ್ಲ. ಗಾಬರಿಗೊಂಡ ಅಕ್ಕ ಸಂಬಂಧಿಕರ ಮನೆಗೆ,ಗಂಡನ ಮನೆಗೆ ಕಾಲ್ ಮಾಡಿ ವಿಚಾರಿಸಿದರೂ ಪತ್ತೆಯಿಲ್ಲ. ಬಳಿಕ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆಕೆ ತನ್ನ ಗಂಡನ ಮನೆಯ ಪಕ್ಕದ ಮನೆಯ ಯುವಕನೊಂದಿಗೆ ಸ್ನೇಹದಿಂದಿದ್ದು ಆತನೊಂದಿಗೇ ಹೋಗಿರಬಹುದೆಂದು ಶಂಕಿಸಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top