‘ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಇನ್ನಿಲ್ಲ

Picture of Namma Bedra

Namma Bedra

Bureau Report

ಬೆದ್ರದ ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜಗದೀಶ್ ಅವರು ಇಂದು ನಿಧನರಾಗಿದ್ದಾರೆ.
ಜಗ್ಗಣ್ಣ ಎಂದೇ ಖ್ಯಾತರಾಗಿದ್ದ ಅವರು ಪೋಸ್ಟ್ ಮಾರ್ಟಮ್ ನಲ್ಲಿ ಪ್ರಸಿದ್ಧಿ ಪಡೆದು ‘ ಪೋಸ್ಟ್ ಮಾರ್ಟಮ್ ಜಗ್ಗಣ್ಣ’ ಎಂದೇ ಹೆಸರುಗಳಿಸಿದ್ದರು.
ಕಾಸರಗೋಡು ಮೂಲದವರಾಗಿರುವ ಅವರು ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಸುದೀರ್ಘ ವರ್ಷ ಸೇವೆ ಸಲ್ಲಿಸಿ ಅದೆಷ್ಟೋ ಜನರ ಪೋಸ್ಟ್ ಮಾರ್ಟಮ್ ನಡೆಸಿದ್ದರು.
ಆಸ್ಪತ್ರೆಯಿಂದ ವಾಪಾಸಾಗಿದ್ದ ಅದೆಷ್ಟೋ ರೋಗಿಗಳ ಕೆಲವೊಂದು ಗಾಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಶುಚಿಗೊಳಿಸುತ್ತಿದ್ದ ಅವರ ಸೇವಾ ಮನೋಭಾವವನ್ನು ಗುರುತಿಸಿ ಹಲವು ಸಂಘಸಂಸ್ಥೆಗಳು ಸನ್ಮಾನಿಸಿತ್ತು.
ಪೋಸ್ಟ್ ಮಾರ್ಟಮ್ ಗೂ ತಾನೇ ಬೇಕಾದ ಸಾಮಾಗ್ರಿಗಳನ್ನು ತಂದು ತಯಾರಾಗುತ್ತಿದ್ದ ಅವರು ಮೃತರ ಮನೆಯವರಿಂದ ಯಾವುದೇ ಹಣ ಪಡೆದುಕೊಳ್ಳುತ್ತಿರಲಿಲ್ಲ.
ಅಸೌಖ್ಯದಲ್ಲಿದ್ದ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದು ಪತ್ನಿ ಭೋಜಮ್ಮ,ಪುತ್ರಿ ಮಧುರಾ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top