ನವಯುಗ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ

Picture of Namma Bedra

Namma Bedra

Bureau Report

ಮಂಗಳೂರಿನ ನವಯುಗ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ಚೇತನ್ ಕುಮಾರ್ ಬಿ.ಅವರ ಅಧ್ಯಕ್ಷತೆಯಲ್ಲಿ ಪಂಪ್ ವೆಲ್ ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಅವರು ಕಳೆದ ಸಾಲಿನ ಆಡಳಿತ, ಹಣಕಾಸು ವ್ಯವಹಾರಗಳು,
ಠೇವಣಿ ಸಂಗ್ರಹ, ಸಾಲ ವಿತರಣೆ ,ಸಾಲ ವಸೂಲಾತಿ,ಲಾಭ ನಷ್ಟ ಹಾಗೂ ಸಂಸ್ಥೆಯ ಒಟ್ಟು ಪ್ರಗತಿಯ ಕುರಿತು ವಿವರಿಸಿದರು.
2025- 26 ನೇ ಸಾಲಿನಲ್ಲಿ ಸಂಸ್ಥೆಯು ಗಳಿಸಿರುವ ರೂ.12.75 ಲಕ್ಷ ಲಾಭ ಹಾಗೂ ರೂ.0.71 ಲಕ್ಷ ನಿವ್ವಳ ಲಾಭದಲ್ಲಿ ಸಾಗುತ್ತಿರುವ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಸಂಸ್ಥೆಯು ಸಾಧಿಸಿರುವ ಪ್ರಗತಿ ಹಾಗೂ ಸದಸ್ಯರಿಗೆ ಒದಗಿಸಲಾದ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ನೀಡಬೇಕಾದ ತ್ವರಿತ ಸೇವೆಗಳ ಬಗ್ಗೆ ಹಾಗೂ ಆರ್ಥಿಕ ಸದೃಢತೆಯನ್ನು ಹೆಚ್ಚಿಸುವ ಕುರಿತು ಚರ್ಚಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಚೇತನ್ ಕುಮಾರ್ ಬಿ.ಅವರು ಮಾತನಾಡಿ ‘ ಸಂಸ್ಥೆಯ ಅಭಿವೃದ್ಧಿಗೆ ಸದಸ್ಯರ ಸಹಕಾರ ಮತ್ತು ವಿಶ್ವಾಸವೇ ಮುಖ್ಯ ಶಕ್ತಿಯಾಗಿದೆ’ ಎಂದರು.
ಶಾಖಾ ವ್ಯವಸ್ಥಾಪಕರಾದ ರೊನಾಲ್ಡ್ ಜೆರಾಲ್ಡ್ ಫೆರ್ನಾಂಡಿಸ್ ಅವರು ಸ್ವಾಗತಿಸಿ ಅಭಿವೃದ್ಧಿ ವ್ಯವಸ್ಥಾಪಕರಾದ ಶರತ್ ಕುಮಾರ್ ಶೆಟ್ಟಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top