ಬೆದ್ರ ತುಳುಕೂಟಕ್ಕೆ ಜಯಂತಿಯಕ್ಕ ಪ್ರೆಸಿಡೆಂಟ್

Picture of Namma Bedra

Namma Bedra

Bureau Report

ಮೂಡುಬಿದಿರೆ: ತುಳು ಕೂಟ(ರಿ) ಬೆದ್ರ ಇದರ ಮುಂದಿನ ಎರಡು ವಷ೯ಗಳ ಅವಧಿಗೆ ಅಧ್ಯಕ್ಷರಾಗಿ ತುಳು ಸಾಹಿತಿ ಜಯಂತಿ ಎಸ್. ಬಂಗೇರ, ಕಾಯ೯ದಶಿ೯ಯಾಗಿ ಚೇತನಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ವೇತಾ ಜೈನ್, ಜತೆ ಕಾಯ೯ದಶಿ೯ಯಾಗಿ ಸದಾನಂದ ನಾರಾವಿ, ಕೋಶಾಧಿಕಾರಿಯಾಗಿ ಜಿನೇಂದ್ರ ಜೈನ್ ಆಯ್ಕೆಯಾಗಿದ್ದಾರೆ.
ತುಳು ಕೂಟ ಬೆದ್ರದ ನಿಗ೯ಮನ ಅಧ್ಯಕ್ಷ ಹೆಚ್. ಧನಕೀತಿ೯ ಬಲಿಪ ಅವರ ಅಧ್ಯಕ್ಷತೆಯಲ್ಲಿ ಕನ್ನಡಭವನದಲ್ಲಿ ಭಾನುವಾರ ನಡೆದ ತುಳುಕೂಟದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
ಜತೆ ಕಾಯ೯ದಶಿ೯ ಸದಾನಂದ ನಾರಾವಿ ಸ್ವಾಗತಿಸಿದರು. ನಿಗ೯ಮನ ಕಾಯ೯ದಶಿ೯ ವೇಣುಗೋಪಾಲ್ ಶೆಟ್ಟಿ ವಾಷಿ೯ಕ ವರದಿ ಮಂಡಿಸಿದರು. ಕೋಶಾಧಿಕಾರಿ ಸುಭಾಶ್ಚಂದ್ರ ಚೌಟ ಖಚು೯ ವೆಚ್ಚದ ವಿವರ ನೀಡಿದರು. ಈ ಸಂದಭ೯ದಲ್ಲಿ ಗೌರವಾಧ್ಯಕ್ಷ ಚಂದ್ರಹಾಸ ದೇವಾಡಿಗ, ನಿಗ೯ಮನ ಉಪಾಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top