ರಾಮ್ ಫ್ರೆಂಡ್ಸ್ ಕಟೀಲ್ ತಂಡದ ಏಳನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಮಣಿಕುಮೇರಿಯ ಹೊಸಬೆಳಕು ಸೇವಾ ಟ್ರಸ್ಟ್ ನಲ್ಲಿ ನಡೆಯಿತು.

ಮೂಡುಬಿದಿರೆ ಪಂಚಶಕ್ತಿ ಎಂಟರ್ ಪ್ರೈಸಸ್ ಮಾಲಕರಾದ ರಂಜಿತ್ ಪೂಜಾರಿ ತೋಡಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಟೀಲ್ ಕಲಾ ಕನ್ಸ್ಟ್ರಕ್ಷನ್ಸ್ ಮಾಲಕ ಲೋಕಯ್ಯ ಸಾಲ್ಯಾನ್ ಕೊಂಡೇಲ, ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷ ಚಂದ್ರ ಪೂಜಾರಿ, ಕಾರ್ಕಳ ಪಿ.ಎಸ್.ಐ, ಶಿವಕುಮಾರ್, ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್, ರಾಮ್ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಮಾನಂದ ಪೂಜಾರಿ ಕಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಆಶ್ರಮಕ್ಕೆ ಹತ್ತು ಸಾವಿರದ ಚೆಕ್ ಹಸ್ತಾಂತರಿಸಿ ಅಗತ್ಯವಿರುವ ನಲವತ್ತು ಸಾವಿರದ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಅಲ್ಲದೆ ಎರಡು ಅಶಕ್ತ ಕುಟುಂಬಗಳಿಗೆ ಇಪ್ಪತ್ತು ಸಾವಿರ ರೂ.ಸಹಾಯಧನ ನೀಡಲಾಯಿತು.
ನಿರಂತರವಾಗಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಸೇವಾ ತಂಡಗಳನ್ನು ಗೌರವಿಸಲಾಯಿತು.
ರಾಮ್ ಫ್ರೆಂಡ್ಸ್ ಅಧ್ಯಕ್ಷ ಸುಮಂತ್ ಸುವರ್ಣ ಬಡಗಮಿಜಾರು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.










