ಕಳೆದ ಇಪ್ಪತ್ತೈದು ವರ್ಷಗಳಿಂದ ಯಕ್ಷಗಾನ ಸೇವೆಯೊಂದಿಗೆ ನೊಂದವರಿಗೆ ನೆರವು ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಪುಚ್ಚಮೊಗರು ಕಂಬಳಗುಡ್ಡೆ ಗೆಳೆಯರ ಬಳಗವು, ಈಬಾರಿ ಎರಡು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ದಿನಬಳಕೆಯ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಬಡ ಕುಡುಂಬಗಳಿಗೆ ನೆರವಾಗಿದೆ.

ಗೆಳೆಯರ ಬಳಗದ ಅಧ್ಯಕ್ಷರಾದ ಆನಂದ ಬಿ ಬಂಗೇರ, ಉಪಾಧ್ಯಕ್ಷರಾದ ಅಜಿತ್ ಜೈನ್, ಹಿರಿಯ ಸದಸ್ಯರಾದ ಮಾರಪ್ಪ ಪೂಜಾರಿ, ಲಿಂಗಪ್ಪ ಬಂಗೇರ, ಚಂದ್ರಹಾಸ ಶೆಟ್ಟಿ, ಭೋಜ ಸಾಲ್ಯಾನ್, ವಿಜಯ್ ಪೂಜಾರಿ, ಗೋಪಾಲ ಪೂಜಾರಿ, ಪ್ರದೀಪ್ ಪೂಜಾರಿ ಹಾಗೂ ಶ್ರೀ ಕುಂಭಕಂಠಿಣಿ ಭಜನಾ ಮಂಡಳಿಯ ಸದಸ್ಯರು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







































