ಈದ್ ಮಿಲಾದ್ ಪ್ರಯುಕ್ತ ರಸ್ತೆ ಬದಿ ಶುಚಿತ್ವಗೊಳಿಸಿದ ವಾಲ್ಪಾಡಿ ಜಮಾತ್ ಬಾಂಧವರು

Picture of Namma Bedra

Namma Bedra

Bureau Report

ಮಂಗಳವಾರ ನಡೆಯಲಿರುವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501 ನೇ ಜನ್ಮದಿನದ ಪ್ರಯುಕ್ತ ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಜಮಾತ್ ಬಾಂಧವರು ಶಿರ್ತಾಡಿ ಸರ್ಕಲ್‌ ನಿಂದ ವಾಲ್ಪಾಡಿ ಮಸೀದಿವರೆಗೆ ರಸ್ತೆಯ ಎರಡೂ ಬದಿಗಳಲ್ಲಿದ್ದ ಕಸ,ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಗಮನಸೆಳೆದಿದ್ದಾರೆ.


ಶಿರ್ತಾಡಿ ಸಾಮ್ರಾಜ್ಯರ ಸರ್ಕಲನ್ನು ಶುಚಿಗೊಳಿಸಿ ಬಳಿಕ ವಾಲ್ಪಾಡಿವರೆಗೆ ರಸ್ತೆ ಬದಿ ಶುಚಿತ್ವಗೊಳಿಸಿದರು.
ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್,ಗೌರವಾಧ್ಯಕ್ಷರಾದ ಮುಹಮ್ಮದ್ ದೋಣಿಬಾಗಿಲು, ಶಿರ್ತಾಡಿ ಹಸನಬ್ಬ (ಬಾವುಞ್ಞಾಕ), ಮುಹಮ್ಮದ್ ಹನೀಫ್, ಜಮಾಲುದ್ದೀನ್,ರಮೀಝ್ ವಾಲ್ಪಾಡಿ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ಹಮೀದ್ ಪುತ್ತ,ಖಾದರ್ ದೋಣಿಬಾಗಿಲು,ಲತೀಫ್, ಇಬ್ರಾಹಿಂ, ಹಸನಬ್ಬ ಕಜೆ, ಅಫ್ರಿದ್, ಅನ್ಸಾಫ್,ಸಲೀಮ್ ಎಣ್ಣೆಹೊಳೆ,ಅಬೂಬಕ್ಕರ್ ಮಾಂಟ್ರಾಡಿ, ಬದ್ರುದ್ದೀನ್,ಅಬ್ಬಾಸ್, ಅಶ್ಫಾಹ್ ವಾಲ್ಪಾಡಿ, ಶಹೀದ್,ಶಬೀಬ್ ಮತ್ತಿತರರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top