ಬೆದ್ರದಲ್ಲೊಬ್ಬ ಬೆಸ್ಟ್ ‘ಪವರ್ ಮ್ಯಾನ್’ *ಗ್ರಾಹಕರಿಂದ ಮೆಚ್ಚುಗೆ ಪಡೆದ ರವಿಯಣ್ಣ

Picture of Namma Bedra

Namma Bedra

Bureau Report

ಹಾಗಂತ ಬೆದ್ರದ ಎಲ್ಲ ಪವರ್ ಮ್ಯಾನ್ ನವರೂ ಒಳ್ಳೆಯವರೇ. ಕಷ್ಟದ ಕೆಲಸವಾದರೂ ತಮ್ಮ ವೃತ್ತಿ ಧರ್ಮವನ್ನು ಪಾಲಿಸುತ್ತಾ ಬಂದವರು. ಯಾವತ್ತೂ ಪ್ರಚಾರದ ಹಿಂದೆ ಬಿದ್ದವರು ಇಲ್ಲ .
ಈ ಪೈಕಿ ರವಿಯಣ್ಣ ಡಿಫರೆಂಟ್.ಸದಾ ನಗುಮುಖದ ಸೇವೆಯೊಂದಿಗೆ ಕೋಟೆಬಾಗಿಲು, ಕೊಡಂಗಲ್ಲು ಪರಿಸರದ ಜನರ ಮನಗೆದ್ದವರು.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗೋವನಕೊಪ್ಪದವರಾಗಿರುವ ರವಿ ಎಚ್‌.ಅವರು ಕಳೆದ ಹತ್ತು ವರ್ಷಗಳಿಂದ ಕೋಟೆಬಾಗಿಲಿನ ಪವರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ‌.
ರಾತ್ರಿ, ಹಗಲು- ಗಾಳಿ,ಮಳೆ ಇದ್ಯಾವುದನ್ನೂ ಲೆಕ್ಕಿಸದೆ ಗ್ರಾಹಕರು ಕಾಲ್ ಮಾಡಿದಾಗಲೆಲ್ಲಾ ಕೂಡಲೇ ಸ್ಪಂದಿಸುತ್ತಾ ಈ ಭಾಗದ ಜನರ ಮೆಚ್ಚುಗೆ ಗಳಿಸಿದ್ದಾರೆ.
ರವಿಯಣ್ಣನ ಸೇವೆಗೆ ಕೋಟೆಬಾಗಿಲು ಪರಿಸರದ ಜನರು ಅಭಿನಂದನೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top