ತೋಡಾರು ಬದ್ರಿಯಾ ಸುನ್ನೀ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ 2926-28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕಮಿಟಿ ಅಧ್ಯಕ್ಷರಾದ ಎಂ.ಎ.ಎಸ್.ಆಸಿಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಎಂ.ಜಿ.ಹಾಜಿ, ಉಪಾಧ್ಯಕ್ಷರಾಗಿ ರಫೀಕ್ ಹಾಜಿ ಇಂಡಿಯನ್, ಮೊಯ್ದಿನ್ ಬಾವಾ ಮಿಜಾರ್, ಪ್ರಧಾನ ಕಾರ್ಯದರ್ಶಿಯಾಗಿ ಅನ್ಸಾರ್ ಮುಚ್ಚೂರು,ಜತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕುಞ್ಞಿ, ಶರೀಫ್ ಅಡ್ಡೂರ್,ಕೋಶಾಧಿಕಾರಿಯಾಗಿ ಶರೀಫ್ ಝಕರಿಯಾ,ವರ್ಕಿಂಗ್ ಕಾರ್ಯದರ್ಶಿಗಳಾಗಿ ಅಬ್ದುಲ್ ರಹ್ಮಾನ್ ಗುಂಡೀರ್,ವನೀಝ್ ಮಿಜಾರ್ ಹಾಗೂ ಸದಸ್ಯರಾಗಿ ಟಿ.ಎಚ್.ಖಾದರ್ ಎಫ್.ಝೋನ್, ಶಾಫಿ ಹೆಚ್ ಎಂ ಟಿ, ರಝಾಕ್ ಪಡು,ಖಲೀಲ್,ಝುಬೈರ್ ಕಲಾಯಿ,ರಿಯಾಝ್ ಹಿದಾಯತ್ ನಗರ ಹಾಗೂ ಸುಹೈಬ್ ಉಲಯಂಗಡಿ ಅವರು ಆಯ್ಕೆಯಾಗಿದ್ದಾರೆ.








































