ಅಳಿಯೂರಿನಲ್ಲಿ ನಾಳೆ 20 ನೇ ವರ್ಷದ ಗಣೇಶೋತ್ಸವ

Picture of Namma Bedra

Namma Bedra

Bureau Report

ಅಳಿಯೂರು-ವಾಲ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಈವರ್ಷ 20 ರ ಸಂಭ್ರಮ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 20 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿಯ ಸ್ಥಾಪಕಾಧ್ಯಕ್ಷ ವೇದಪ್ರಕಾಶ್ ಪಡಿವಾಳ್ ಹಾಗೂ ಅಧ್ಯಕ್ಷ ಹರೀಶ್ ಬಿ.ಪೂಜಾರಿ ಅವರು ತಿಳಿಸಿದ್ದಾರೆ.
ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆ,ಬಳಿಕ ಭಜನಾ ಕಾರ್ಯಕ್ರಮ, ಮಹಾಪೂಜೆ,ಅನ್ನ ಸಂತರ್ಪಣೆ,ನೃತ್ಯ ವೈವಿಧ್ಯ, ಭರತನಾಟ್ಯ, ಜಾನಪದ ನೃತ್ಯ ಹಾಗೂ ಶೋಭಾಯಾತ್ರೆ ನಡೆಯಲಿದೆ.
ಸಮಿತಿಯ ಗೌರವಾಧ್ಯಕ್ಷರಾಗಿ ಕೋಂಕೆ ನಾರಾಯಣ ಶೆಟ್ಟಿ, ಲಕ್ಷ್ಮಣ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಆಚಾರ್ಯ, ಕಾರ್ಯದರ್ಶಿಗಳಾಗಿ ಶಿವಾನಂದ ಎಸ್.ಪಾಂಡ್ರು,ರಾಜೇಶ್ ಕುಂದರ್, ಉಪಾಧ್ಯಕ್ಷರಾಗಿ ನಾಗೇಶ್ ಬಂಗೇರ,ರವೀಂದ್ರ ಅಮೀನ್, ಅಶ್ವಥ್,ಕೋಶಾಧಿಕಾರಿಗಳಾಗಿ ಪ್ರವೀಣ್ ಆರ್.ಶೆಟ್ಟಿ, ದಿನೇಶ್ ಕೋಟ್ಯಾನ್,ಜೊತೆ ಕೋಶಾಧಿಕಾರಿಗಳಾಗಿ ಜಿನೇಂದ್ರ ಜೈನ್,ಹರೀಶ್ ಪೂಜಾರಿ, ಲೋಕೇಶ್ ಸಾಲ್ಯಾನ್,ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಎಸ್.ಪೂಜಾರಿ, ವಿಶ್ವನಾಥ ಸಾಲ್ಯಾನ್, ಮಧು ಕುಮಾರ್, ಲೆಕ್ಕ ಪರಿಶೋಧಕರಾಗಿ ಶೇಖರ ಜೆ.ಪೂಜಾರಿ, ಶುಭ ಎಸ್.ಸಾಲ್ಯಾನ್, ಕ್ರೀಡಾ ಅಧ್ಯಕ್ಷರಾಗಿ ಸುಜಾತಾ ಶೆಟ್ಟಿ,ಕ್ರೀಡಾ ಕಾರ್ಯದರ್ಶಿಗಳಾಗಿ ನಾಗೇಶ್ ಶೆಟ್ಟಿ,ಸುಕೇಶ್ ಪೂಜಾರಿ, ರಮೇಶ್ ಸಾಲ್ಯಾನ್ ,ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಮನೋಜ್ ,ಗಣೇಶ್ ಎಸ್.ಕೋಟ್ಯಾನ್,ಪ್ರಿಯೇಶ್,ವಿದ್ಯಾನಂದ, ದೀಪಿಕಾ , ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿಶ್ವನಾಥ ಕೋಟ್ಯಾನ್, ಗಣೇಶ್ ಬಿ.ಅಳಿಯೂರು ಹಾಗೂ ಶೇಖರ ಪಣಪಿಲ ಅವರು ಸಹಕರಿಸುತ್ತಿದ್ದು ಗಣೇಶೋತ್ಸವದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top