ಇರುವೈಲು ಫ್ರೆಂಡ್ಸ್ ಕ್ಲಬ್ 15 ನೇ ವರ್ಷದ ಗಣೇಶೋತ್ಸವ *ಚಂದ್ರಹಾಸ ಸನಿಲ್, ಕುಮಾರ್ ಪೂಜಾರಿ ಅವರಿಗೆ ಸನ್ಮಾನ *ನೂತನ ಕಡ್ಟಡ ಉದ್ಘಾಟಿಸಿದ ದೋಟ ಸುರೇಶ್ ಶೆಟ್ಟಿ

Picture of Namma Bedra

Namma Bedra

Bureau Report

ಇರುವೈಲು ಫ್ರೆಂಡ್ಸ್ ಕ್ಲಬ್ ನ ವತಿಯಿಂದ ನಡೆದ ಹದಿನೈದನೇ ವರ್ಷದ ಗಣೇಶೋತ್ಸವದಲ್ಲಿ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುರುವ ಚಂದ್ರಹಾಸ ಸನಿಲ್ ಹಾಗೂ ಇರುವೈಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಟ್ಟಡವನ್ನು ಮಿಜಾರು ದೋಟ ‘ಹರಿ-ಮೀನಾಕ್ಷಿ’ಯ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.
ಇರುವೈಲು ದೇವಸ್ಥಾನದ ಪ್ರಧಾನ ಅರ್ಚಕರಾದ ಐ.ರಾಘವೇಂದ್ರ ಅಸ್ರಣ್ಣ ಅವರು ಆಶೀರ್ವಚನ ನೀಡಿದರು.


ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತಾ ಜೆ.ಶೆಟ್ಟಿ, ಸದಸ್ಯರಾದ ಪ್ರದೀಪ್ ಶೆಟ್ಟಿ, ದೀಪಾ ದಿನೇಶ್ ಬಟಾರ ಅತಿಥಿಗಳಾಗಿ ಭಾಗವಹಿಸಿದ್ದರು.
ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಪೂಜಾರಿ, ಸ್ಥಾಪಕಾಧ್ಯಕ್ಷ ಪ್ರಶಾಂತ್ ಅಮೀನ್, ಲೋಕೇಶ್ ಆಚಾರ್ಯ, ಗುರುಶರಣ್,ಪದ್ಮನಾಭ ಪೂಜಾರಿ, ಪ್ರದೀತಾ ಅಶೋಕ್ ಪೂಜಾರಿ, ವಸಂತ ಸಾಲ್ಯಾನ್, ಧರ್ಮಸ್ಥಳ ಯೀಜನೆಯ ಸೇವಾ ಪ್ರತಿನಿಧಿಗಳಾದ ಪ್ರತಿಭಾ ಶೆಟ್ಟಿ, ಸುರೇಖಾ ಶೆಟ್ಟಿ, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಯಶೋಧರ್,ಕೋಶಾಧಿಕಾರಿ ಪ್ರವೀಣ್ ಪೂಜಾರಿ ,ಪ್ರದೀಪ್ ಶೆಟ್ಟಿ, ಭರತ್ ಶೆಟ್ಟಿ, ದಯಾನಂದ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂತೋಷ್ ಪೂಜಾರಿ ಬಟಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top