ಬಿಜೆಪಿಯ ಯುವಮೋರ್ಚಾದಲ್ಲಿ ಸಕ್ರಿಯರಾಗಿದ್ದ ಯುವ ಮುಖಂಡ ಪ್ರತೀಕ್ ಶೆಟ್ಟಿ ಕಿನ್ನಿಗೋಳಿ ಅವರು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಲವು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಕಿನ್ನಿಗೋಳಿ ಪರಿಸರದಲ್ಲಿ ಬಿಜೆಪಿಯ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದರು.
ವಿವಾಹಿತರಾಗಿದ್ದು ಸಣ್ಣ ಪ್ರಾಯದ ಹೆಣ್ಣು ಮಗುವೊಂದಿದೆ.
ಯುವ ಮುಖಂಡನ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡರಾದ ರಂಜಿತ್ ಪೂಜಾರಿ, ಅಶ್ವಥ್ ಪಣಪಿಲ, ಸುಂದರ ಪೂಜಾರಿ ನಿಡ್ಡೋಡಿ ಸಹಿತ ಹಲವಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.








































