ಕೊನೆಗೂ ಲಾಕ್ ಆದ ಡೇಂಜರ್ ಮಂಗ!

Picture of Namma Bedra

Namma Bedra

Bureau Report

ಶಿರ್ತಾಡಿ ಪರಿಸರದಲ್ಲಿ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿ ಸುದ್ಧಿಯಾಗಿದ್ದ ‘ರಂಗ’ ಹೆಸರಿನ ಮಂಗವು ಕೊನೆಗೂ ಲಾಕ್ ಆಗಿದೆ.ಅರಣ್ಯ ಇಲಾಖೆಯವರು ರಂಗನನ್ನು ಆರೆಸ್ಟ್ ಮಾಡಿದ್ದಾರೆ.
ಶಿರ್ತಾಡಿ ಕಜೆ ಪರಿಸರದ ಬಲರಾಮ ಭಟ್ ಹಾಗೂ ಅಳಿಯೂರು ಪಣಪಿಲ ಸಮೀಪದ ವನಿತ್ ಎಂಬವರ ಮೇಲೆ ದಾಳಿ ನಡೆಸಿದ್ದ ಈ ಮಂಗವು ಗಂಭೀರ ಗಾಯಗೊಳಿಸಿ ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿತ್ತು.
ಅದಾದ ಬಳಿಕ ಈ ಪರಿಸರದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.ಸ್ಥಳೀಯರು ಹಾಗೂ ಅರಣ್ಯ ಇಲಾಖಾಧಿಕಾರಿಗಳು ಅದನ್ನು ಹಿಡಿಯಲು ಪ್ರಯತ್ನಿಸಿದ್ದರೂ ಅದು ಸಿಗದೆ ಮಂಗಮಾಡಿತ್ತು.
ಅದೇ ಮಂಗನಿಗಾಗಿ ಅರಣ್ಯ ಇಲಾಖೆಯವರು ಗೂಡು ಇಟ್ಟಿದ್ದರು.ಮೊನ್ನೆ ಒಮ್ಮೆ ಗೂಡೊಳಗೆ ತಿಂಡಿ ಹಾಕಿದ್ದು ಅದನ್ನು ತಿಂದ ಬಳಿಕ ಎಸ್ಕೇಪ್ ಆಗಿ ತಿಂಡಿ ಇಟ್ಟವರನ್ನೇ ಮಂಗ ಮಾಡಿತ್ತು.
ಆದರೆ ಈದಿನ
ಹಾಗಾಗಲಿಲ್ಲ.ಪಣಪಿಲದ ಸುಂದರ ಪೂಜಾರಿಯವರ ಪುತ್ರಿ ಮಂಗನಿಗಾಗಿ ಗೂಡೊಳಗೆ ದೋಸೆ ಹಾಕಿ ಹೋಗಿದ್ದರು. ಮಂಗ ದೋಸೆ ತಿನ್ನಲು ಬಂದ ಕೂಡಲೇ ಬಾಗಿಲು ಲಾಕ್ ಮಾಡಲಾಯಿತು.ಮಂಗನಿಗೆ ಈದಿನ ಮಂಗಮಾಡಿ ಎಸ್ಕೇಪ್ ಆಗಲು ನೋ ಚಾನ್ಸ್.
ಗೂಡೊಳಗೆ ಬಂಧಿಯಾದ ಮಂಗನನ್ನು ನೋಡಲು ಸುಮಾರು ಜನ ಸೇರಿದ್ದರು. ಅರಣ್ಯ ಇಲಾಖಾಧಿಕಾರಿಗಳು ಬಂದು ರಂಗನನ್ನು ಬಂಧಿಸಿ ಕರೆದೊಯ್ದಿದ್ದಾರೆ.ರಂಗನನ್ನು ಎಲ್ಲಿಗೆ ಬಿಡುತ್ತಾರೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top