ಮೂಡುಬಿದಿರೆಯಲ್ಲಿ ನಾಳೆ ‘ಯತ್ವಿಕ್ ಪ್ಲೇಸ್’ ಶುಭಾರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆ-ಬಂಟ್ವಾಳ ರಸ್ತೆಯ ಮಾರುತಿ ಶೋರೂಮ್ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ‘ಯತ್ವಿಕ್ ಪ್ಲೇಸ್’ ಎಂಬ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಬೋರ್ಡಿಂಗ್ & ಲಾಡ್ಜಿಂಗ್ ನಾಳೆ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಬೆಳಿಗ್ಗೆ 10-30ಕ್ಕೆ ಯಶೋಧಾ ಕೆ.ಶೆಟ್ಟಿ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದು ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ.
ತುಳು ನಾಟಕ-ಚಿತ್ರರಂಗದ ನಿರ್ದೇಶಕ ದೇವದಾಸ್ ಕಾಪಿಕಾಡ್ ಹಾಗೂ ಚಿತ್ರನಟ ಪ್ರಕಾಶ್ ತೂಮಿನಾಡ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ರುದ್ರಾಂಶ ಕನ್ಸ್ಟ್ರಕ್ಷನ್ಸ್ ನ ಅಜಯ್ ಶೆಟ್ಟಿ ಅವರು ನೂತನ ಕಟ್ಟಡವನ್ನು ಕನ್ಸ್ಟ್ರಕ್ಷನ್ ಮಾಡಿದ್ದು ಮೂಡುಬಿದಿರೆಯಲ್ಲಿ ಈ ಹೊಸ ಸಂಸ್ಥೆ ಪ್ರಸಿದ್ಧಿ ಪಡೆಯಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top