ಮೂಡುಬಿದಿರೆಯಲ್ಲಿ ‘ಯತ್ವಿಕ್ ಪ್ಲೇಸ್’ ಶುಭಾರಂಭ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಬಂಟ್ವಾಳ ರಸ್ತೆಯಲ್ಲಿ ನೂತನವಾಗಿ,ಸುಸಜ್ಜಿತವಾಗಿ ನಿರ್ಮಿಸಿರುವ ‘ಯತ್ವಿಕ್ ಪ್ಲೇಸ್’ ಸಂಸ್ಥೆಯನ್ನು ಸಂಸ್ಥೆಯ ಮಾಲಕ ಸಚಿನ್ ಶೆಟ್ಟಿ ಅವರ ತಾಯಿ ಯಶೋಧಾ ಕೆ‌.ಶೆಟ್ಟಿ ಅವರು ಉದ್ಘಾಟಿಸಿ ಯಶಸ್ಸಿಗೆ ಹಾರೈಸಿದರು.
ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಆಶೀರ್ವಚಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ನಾಟಕ, ಚಿತ್ರರಂಗದ ಖ್ಯಾತ ನಿರ್ದೇಶಕರಾಗಿರುವ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ ‘ ಸಚಿನ್ ಶೆಟ್ಟಿ ಅವರ ಮಾಲೀಕತ್ವದ ಇಂತಹ ಸಂಸ್ಥೆ ಮೂಡುಬಿದಿರೆಯಲ್ಲಿ ಅಗತ್ಯವಿತ್ತು,ಬೆಳೆಯುತ್ತಿರುವ ಮೂಡುಬಿದಿರೆಯಲ್ಲಿ ಈ ಉದ್ಯಮ ಯಶಸ್ವಿಯಾಗಲಿ’ ಎಂದು ಹಾರೈಸಿದರು.


ನಟ ಪ್ರಕಾಶ್ ತೂಮಿನಾಡ್, ಉದ್ಯಮಿ ಕೆ.ಶ್ರೀಪತಿ ಭಟ್, ಸುದರ್ಶನ ಎಂ.ಮೂಡುಬಿದಿರೆ,ಉದ್ಯಮಿ ರಂಜಿತ್ ಪೂಜಾರಿ,ಅಶೋಕ್ ಶೆಟ್ಟಿ ಬೇಲೊಟ್ಟು, ಶಮಿತ್ ರಾಜ್ ದರೆಗುಡ್ಡೆ, ಸೂರ್ಯಕಾಂತ್ ಜಯ ಸುವರ್ಣ, ಲೋಕೇಶ್,ಶೋಭಾ ಹೆಗ್ಡೆ,ಶಿವಪ್ರಸಾದ್ ಹೆಗ್ಡೆ, ನವೀನ್ ಶೆಟ್ಟಿ, ವಿಠಲ ಶೆಟ್ಟಿ, ರವಿಪ್ರಸಾದ್ ಉಪಧ್ಯಾಯ,ಇಕ್ಬಾಲ್ ಕರೀಮ್, ಶಂಕರ್ ಶೆಟ್ಟಿ, ಸಂದೀಪ್ ಶೆಟ್ಟಿ, ವಿನೋದ್ ಶೆಟ್ಟಿ, ಶಶಿಧರ ಶೆಟ್ಟಿ,ಕುಮಾರ್ ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಟ್ಟಡದ ಕನ್ಸ್ಟ್ರಕ್ಷನ್ಸ್ ಕೆಲಸ ನಿರ್ವಹಿಸಿದ ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮಾಲಕ ಅಜಯ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top