ಕಥೆ ಚೆನ್ನಾಗಿದೆ.ಸದನದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಈ ಕಥೆಯನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ.ಮಾತುಗಾರಿಕೆಗೆ ಅವರು ಎದ್ದು ನಿಂತರೆ ಕೇನ್ಗಾ ಕೇನ್ಗಾ ಅಂತಾಗುತ್ತದೆ.ಮಾತುಗಾರಿಕೆಯಿಂದಲೇ ಅವರು ಪ್ರಚಾರಕ್ಕೆ ಬಂದು ಶಾಸಕರಾದವರು.
ಈ ಕಥೆಯನ್ನು ಕೂಡಾ ಸಮಯಕ್ಕನುಗುಣವಾಗಿ ತುಂಬಾ ಚೆನ್ನಾಗಿ ಹೆಣೆದು ಹೇಳಿದ್ದಾರೆ.ವಿರೋಧ ಪಕ್ಷದವರಿಂದ ಈ ಕಥೆಗೆ ಚಪ್ಪಾಳೆಗಳೂ ಸಿಕ್ಕಿದೆ.
ಅವರು ಹೇಳಿದ ಶೀನಪ್ಪನ ಕಥೆ ಹೀಗಿದೆ:
‘ ನಮ್ಮೂರಲ್ಲೊಬ್ಬ ಶೀನಪ್ಪ ಅಂತ ಇದ್ದ.ಅವನಲ್ಲಿ ಒಂದು ಪೈಸೆ ಇರಲಿಲ್ಲ.ಆದರೂ ಆತನಿಗೆ ಪ್ರಚಾರದ ಹುಚ್ಚು.ತಾನೂ ಫೇಮಸ್ ಆಗ್ಬೇಕು,ತನ್ನನ್ನೂ ಅತಿಥಿಯಾಗಿ ಎಲ್ಲರೂ ಕರೆಯಬೇಕು,ತಾನೂ ಇತರರಂತೆ ಕಾರಿನಲ್ಲಿ ತಿರುಗಬೇಕು,ತಾನೂ ಒಂದು ಪಾಶಾದ ಮನೆಯಲ್ಲಿರಬೇಕು’ ಎಂದು ಎಲ್ಲವನ್ನೂ ತಯಾರಿ ಮಾಡಿಕೊಂಡ.
ಗಣೇಶೋತ್ಸವ, ಮನೆಗಳಿಗೆ, ಕಾರ್ಯಕ್ರಮಗಳಿಗೆ ಅಂತ ನೂರರಷ್ಟು ಚೆಕ್ ಗಳನ್ನು ಕೊಟ್ಟ.ಜನರು ಅವನ ಬಗ್ಗೆ ಪುಗರಾಟಿಕೆಯ ಮಾತುಗಳನ್ನಾಡತೊಡಗಿದರು.ಆದರೆ ಅವನ ಖಾತೆ ಝೀರೋ ಬ್ಯಾಲೆನ್ಸ್ ಅಂತ ಗೊತ್ತಾದದ್ದು ಬ್ಯಾಂಕ್ ಗೆ ಚೆಕ್ ಹಾಕಿದಾಗಲೇ....!
ಜನ ಅವನ ಮನೆಮುಂದೆ ಹೋಗಿ ಚೆಕ್ ಬಗ್ಗೆ ವಿಚಾರಿಸಿದಾಗ ನೆಕ್ಸ್ಟ್ ಮಂತ್ ಬರ್ತದೆ ಅಂತ ವಾಪಾಸು ಕಳುಹಿಸಿದ.ಮತ್ತೂ ಹಣ ಬಾರದಿರುವುದನ್ನು ಗಮನಿಸಿದ ಜನರು ಒಂದಾಗಿರುವುದನ್ನು ಅರಿತ ಶೀನಪ್ಪ ಊರೇಬಿಟ್ಟ!
ನಿಮ್ಮ( ಕಾಂಗ್ರೆಸ್) ಸರಕಾರದ ಕಥೆಯೂ ಹಾಗೆನೇ. ಊರು ತುಂಬಾ ಚೆಕ್ ಕೊಟ್ಟಿದ್ದೀರಿ,ಖಜಾನೆಯಲ್ಲಿ ಕಾಸಿಲ್ಲದೆ ಝೀರೋ ಬ್ಯಾಲೆನ್ಸ್ ಆಗಿದೆ,ಮುಂದಿನ ಚುನಾವಣೆಯಲ್ಲಿ ನೀವೂ ಶೀನಪ್ಪನಂತೆ ಊರು ಬಿಡುವ ಪರಿಸ್ಥಿತಿ ಬರಲಿದೆ….!











