ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಪೌರಕಾರ್ಮಿಕರನ್ನು ಗೌರವಿಸಿ ಅವರೊಂದಿಗೆ ಭೋಜನ ಮಾಡಿದ್ದು ಅತ್ಯಂತ ಸಂತಸದ ಸಂಗತಿ, ಪೌರ ಕಾರ್ಮಿಕರ ಕೆಲಸ ಶ್ರೇಷ್ಠವಾಗಿದ್ದು,ಅವರನ್ನು ಗೌರವಿಸಲು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರೇ ಪ್ರೇರಣೆಯೆಂದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪ್ರವೀಣ್ ಕುಮಾರ್ ಜೈನ್ ಅವರು ಹೇಳಿದ್ದಾರೆ.



ಈಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ‘ ಕಳೆದ ಎರಡು ವರ್ಷಗಳಿಂದ ಮೂಡುಬಿದಿರೆಯ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರಿಗೆ ಭೋಜನದ ವ್ಯವಸ್ಥೆ ಮಾಡುತ್ತಿರುವ ಮಿಥುನ್ ರೈ ಅವರು ಮಾದರಿಯಾಗಿದ್ದಾರೆ, ಹಲವು ಮುಖಂಡರು, ಅಧಿಕಾರಿ ವರ್ಗದವರೊಂದಿಗೆ ಪೌರಕಾರ್ಮಿಕರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಶ್ಲಾಘನೀಯ ಎಂದು ಹೇಳಿದ್ದಾರೆ.
ಡಿಕೆಶಿ ಅವರು ಕೂಡಾ ಪೌರಕಾರ್ಮಿಕರನ್ನು ಗುರುತಿಸುವ ಮೂಲಕ ಶ್ರೇಷ್ಠರೆನಿಸಿದ್ದಾರೆ, ಪೌರ ಕಾರ್ಮಿಕರ ಜೀವನದಲ್ಲೂ ಸಂತಸ ತರುವಂತಹ ಕೆಲಸ ಮಾಡಿದ ಇಬ್ಬರು ನಾಯಕರಿಗೂ ಪ್ರವೀಣ್ ಜೈನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.











