ರಸ್ತೆ ರಿಪೇರಿ ಮಾಡಿದ ಅಳಿಯೂರು ಯುವಕರು

Picture of Namma Bedra

Namma Bedra

Bureau Report

ಅಳಿಯೂರಿನ ಪೋನೋಟು ಚಡಾವಿನ ರಸ್ತೆ ತುಂಬಾ ಹೊಂಡಗುಂಡಿಗಳು ಬಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ಸಮಸ್ಯೆಯಾಗಿತ್ತು.


ಇದನ್ನು ಮನಗಂಡ ಪ್ರದೀಪ್ ಪಣಪಿಲ ಅವರ ನೇತೃತ್ವದ ಯುವಕರ ತಂಡವು ಭಾನುವಾರ ರಾತ್ರಿ ರಸ್ತೆ ರಪೇರಿ ಮಾಡಿ ವಾಹನ,ಜನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.
ಯುವಕರ ಈ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಪ್ರದೀಪ್ ಅವರ ಜೊತೆಗೆ ಅಳಿಯೂರಿನ ರವೀಂದ್ರ,ಸಂತೋಷ್ ಕೋಟ್ಯಾನ್, ಲೋಕೇಶ್, ಸುರೇಂದ್ರ ಹಾಗೂ ಶಿವಾನಂದ ಅವರು ಕೈಜೋಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top