ಈಕೆ ರಮ್ಯಾ. ಮೂಡುಬಿದಿರೆಯ ಪುರಾತನ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಸುಂದರ್ ಹಾಗೂ ರಾಧಾ ದಂಪತಿಯ ಪುತ್ರಿ.
ಎಲ್ಲಾ ಯುವತಿಯರಂತೆ ಬದುಕಿನ ಸುಂದರ ಕನಸು ಕಾಣುತ್ತಿದ್ದ ಈ ಯುವತಿಯ ಬದುಕಲ್ಲಿ ಒಂದು ನೋವು ಆವರಿಸಿಕೊಂಡಿದೆ.ಅದು ‘ಥೋರಾಕೋಲಂಬರ್ ಕೈಫೋಸ್ಕೋಲಿಯೊಸಿಸ್’ ಎನ್ನುವ ಬೆನ್ನುಮೂಳೆಗೆ ಸಂಬಂಧಿಸಿದ ರೋಗವದು.

ಈ ಬೆನ್ನುಮೂಳೆ ನೋವಿನಿಂದ ಬಳಲಿದ ಆಕೆ ಹೇಗಿದ್ದವಳು ಹೇಗಾದಳು? ಎನ್ನುವುದನ್ನು ಚಿತ್ರವೇ ಹೇಳುತ್ತಿದೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಆಕೆಗೂ ಕನಸುಗಳಿವೆ , ಬದುಕು ಇದೆ, ಜೀವನದಲ್ಲಿ ಸಾಧಿಸುವ ಗುರಿಯಿದೆ.ಆದರೆ ಈ ಒಂದು ನೋವು ಆಕೆಯನ್ನು ಆಸ್ಪತ್ರೆ ಸೇರಿಸಿದೆ.
ಆಕೆ ಗುಣಮುಖಳಾಗಿ ಮತ್ತೆ ಹಿಂದಿನಂತಾಗಲು 25 ಲಕ್ಷಕ್ಕಿಂತಲೂ ಅಧಿಕ ಹಣ ಬೇಕಾಗಬಹುದೆಂದು ವೈದ್ಯರು ಹೇಳಿದ್ದಾರೆ.
ರಮ್ಯಾಳ ಚಿತ್ರ ನೋಡುವಾಗ ನಮ್ಮದೇ ಪಕ್ಕದ್ಮನೆಯ ಮಗಳಂತೆ ಕಾಣುತ್ತಾಳೆ.ಆಕೆಯ ಇಂದಿನ ಸ್ಥಿತಿ ಬೇಸರ ತರಿಸುತ್ತದೆ.
ಆಕೆ ಮತ್ತೆ ಹಿಂದಿನಂತಾಗಬೇಕಾದರೆ ಸಹೃದಯಿ ದಾನಿಗಳ ಸಹಾಯ ಹಸ್ತದ ಅಗತ್ಯ ಖಂಡಿತಾ ಇದೆ,ಅದು ತುರ್ತಾಗಿ ಆಗಬೇಕಿದೆ.
ಸಹಾಯ ಮಾಡಲಿಚ್ಚಿಸುವವರು ಇಲ್ಲಿ ನೀಡಲಾದ ಖಾತೆ ಸಂಖ್ಯೆಗೆ ಕಳುಹಿಸುವಂತೆ ಕೋರಿಕೆ.











